ಮಂಡ್ಯ: ಇಂದು ( ಜೂನ್ 4 ) ದೇಶಾದ್ಯಂತ ಲೋಕಸಭೆ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಆರಂಭದ ಸುತ್ತುಗಳಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಳ್ಳುವ ಮುನ್ಸೂಚನೆಯನ್ನು ಮುನ್ನಡೆಯ ಅಂಕಿಅಂಶಗಳು ನೀಡುತ್ತಿವೆ.
ಪ್ರತಿ ಬಾರಿಯಂತೆ ಈ ಬಾರಿಯೂ ಭಾರೀ ಚರ್ಚೆಗೆ ಒಳಗಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ವೆಂಕಟರಮಣೇಗೌಡ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಬೆಳಗ್ಗೆ 10.15ರ ಸಮಯಕ್ಕೆ ಕುಮಾರಸ್ವಾಮಿ 100937 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಈ ಸಮಯಕ್ಕೆ ಕುಮಾರಸ್ವಾಮಿ 248730 ಮತಗಳನ್ನು ಪಡೆದುಕೊಂಡಿದ್ದರೆ, ಎದುರಾಳಿ ವೆಂಕಟರಮಣೇಗೌಡ 147793 ಮತಗಳನ್ನು ಪಡೆದುಕೊಂಡಿದ್ದಾರೆ.





