ನವದೆಹಲಿ: ಬಾಲಿವುಡ್ ನ ಜನಪ್ರಿಯ ನಾಯಕಿ ಕಂಗನಾ ರಣಾವತ್ ಈ ಬಾರಿ ಎಂಪಿ ಟಿಕೆಟ್ ಸಿಕ್ಕಿದೆ. ಕೊನೆಗೂ ಬಾಲಿವುಡ್ ಕ್ವೀನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ರಣಾವತ್ ಕಣಕ್ಕಿಳಿಯುತ್ತಿದ್ದಾರೆ.
ಲೋಕಸಭಾ ಚುನಾವಣೆಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, “ಪ್ರಧಾನಿ ಮೋದಿ ವಾರಣಾಸಿಯಿಂದ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅರುಣಾಚಲ ಪಶ್ಚಿಮದಿಂದ, ಬಿಜೆಪಿ ಸಂಸದ ಬಿಷ್ಣು ಪದಾ ರೇ ಅಂಡಮಾನ್ ಮತ್ತು ನಿಕೋಬಾರ್ ನಿಂದ, ಬಿಜೆಪಿ ಸಂಸದ ತಪಿರ್ ಗಾವೊ ಅರುಣಾಚಲ ಪೂರ್ವದಿಂದ, ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ದಿಬ್ರುಗಢದಿಂದ ಸ್ಪರ್ಧಿಸಲಿದ್ದಾರೆ” ಎಂದು ಹೇಳಿದರು.





