Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕರ್ನಾಟಕಕ್ಕೆ ಹರಿದು ಬರುತ್ತಿದೆ ಲೀಟರ್‌ಗಟ್ಟಲೆ ಗೋವಾ ಮದ್ಯ- ಚೆಕ್‌ಪೋಸ್ಟ್‌ಗಳಲ್ಲಿ ಭಾರಿ ಟೈಟ್‌

ಕಾರವಾರ: ಕರ್ನಾಟಕದಲ್ಲಿ ಚುನಾವಣೆ ಘೋಷಣೆ ಆದಾಗಲೆಲ್ಲ ಮದ್ಯ ವ್ಯವಹಾರ ಚುರುಕಾಗುವ ಪಕ್ಕದ ಗೋವಾ ರಾಜ್ಯದಲ್ಲಿ, ಈ ಬಾರಿಯೂ ಕರ್ನಾಟಕ ವಿಧಾನಸಭೆ ಚುನಾವಣೆಯಿಂದ ಮದ್ಯ ವ್ಯವಹಾರ ಜೋರಾಗಿದೆ.

ಗೋವಾ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಮಾಜಾಳಿ, ಅನಮೋಡ, ಕಣಕುಂಬಿ ಚೆಕ್‌ಪೋಸ್ಟ್‌ ಮೂಲಕ ಮದ್ಯ ಸಾಗಾಟ ಪ್ರಯತ್ನ ನಡೆಯುತ್ತಲೇ ಇದೆ.ರಾಜ್ಯದ ವಿವಿಧ ಜಿಲ್ಲೆಗಳಿಗೆ ಉತ್ತರ ಕನ್ನಡದ ಮೂಲಕವೂ ಗೋವಾ ಮದ್ಯ ಅಕ್ರಮವಾಗಿ ಸಾಗಾಟ ನಡೆಯುತ್ತದೆ. ಇದರಿಂದ ಎರಡು ತಿಂಗಳ ಅವಧಿಯಲ್ಲಿ ಗಡಿ ಜಿಲ್ಲೆಗಳಲ್ಲಿ ಮದ್ಯ ತುಂಬಿದ ಲಾರಿಗಳು ಪದೇ ಪದೆ ಅಬಕಾರಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದೆ.

ಸದ್ಯ ಮಾಜಾಳಿ ಚೆಕ್‌ಪೋಸ್ಟ್‌ನಿಂದ ನಿತ್ಯ ಪರವಾನಗಿ ಹೊಂದಿದ 3-4 ಲಾರಿಗಳು ಸಾಗುತ್ತವೆ. ಅದರಲ್ಲಿ ಕೆಲ ಲಾರಿಗಳಲ್ಲಿ700 ಬಾಕ್ಸ್‌ ಮದ್ಯ ಇದ್ದರೆ, ಇನ್ನು ಕೆಲವು 1200 ಬಾಕ್ಸ್‌ ಮದ್ಯ ಸಾಗಣೆಯಾಗುತ್ತದೆ. ಇವುಗಳ ಜತೆಯಲ್ಲಿಯೇ ಆಗಾಗ ಪರವಾನಿಗೆ ಇಲ್ಲದ ಲಾರಿ, ಪ್ರವಾಸಿ ವಾಹನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವಾ ಮದ್ಯ ಗಡಿ ದಾಟುತ್ತಿವೆ.

ಅಸಲಿಗೆ ಅಕ್ರಮವಾಗಿ ಮದ್ಯ ಸಾಗಿಸುವ ಅಂತಾರಾಜ್ಯ ಜಾಲವೊಂದು ಅನೇಕ ವರ್ಷಗಳಿಂದ ಸಕ್ರಿಯವಾಗಿದೆ. ಮಹಾರಾಷ್ಟ್ರ, ಗುಜರಾತ್‌ ಸೇರಿ ಅನೇಕ ರಾಜ್ಯಗಳಿಗೆ ಆ ಜಾಲದ ಮೂಲಕ ಮದ್ಯ ಪೂರೈಕೆ ಆಗುತ್ತವೆ. ಮಹಾರಾಷ್ಟ್ರ ಗಡಿ, ಬೆಳಗಾವಿ ಗಡಿ, ಉತ್ತರ ಕನ್ನಡ ಗಡಿಯನ್ನು ಈ ಜಾಲವು ಪರ್ಯಯವಾಗಿ ಬಳಸಿಕೊಳ್ಳುತ್ತಾ ಆಗಾಗ ಸಿಕ್ಕಿ ಬೀಳುತ್ತದೆ.

ಮೀನುಗಾರರ ನೆರವು : ಈಗ ಚುನಾವಣೆ ಕಾರಣ ಕರ್ನಾಟಕದಲ್ಲಿ ಅಕ್ರಮ ಮದ್ಯ ಬೇಡಿಕೆ ಹೆಚ್ಚಿದೆ. ಇದರಿಂದ ಗೋವಾದಿಂದ ಮದ್ಯ ಸಾಗಿಸುವ ಯತ್ನಗಳೂ ನಿರಂತವಾಗಿವೆ. ಇನ್ನೊಂದೆಡೆ ಮದ್ಯ ಅಕ್ರಮ ಹಾವಳಿ ತಪ್ಪಿಸುವುದಕ್ಕಾಗಿಯೇ ಪೊಲೀಸ್‌ ಇಲಾಖೆ ಸ್ಥಳೀಯ ಮೀನುಗಾರರ ನೆರವು ಕೋರಿದೆ. ಜಲ ಮಾರ್ಗದ ಮೂಲಕ ಮದ್ಯ ಸಾಗಿಸುವ ಜಾಲ ಕಂಡರೆ ತಿಳಿಸುವಂತೆ ಕೋರಿದೆ.

ಚುನಾವಣೆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಜಿಲ್ಲೆಯೊಳಗೂ ವಾಹನ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಕಾರವಾರ ಅಬಕಾರಿ ಉಪ ಆಯುಕ್ತ ಜಗದೀಶ ಕುಲಕರ್ಣಿ ತಿಳಿಸಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ