Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಅಕ್ಕಿ ಕೊಡುವಂತೆ ಬಿಎಸ್‌ವೈ, ಬೊಮ್ಮಾಯಿ ಮೋದಿ ಸರ್ಕಾರಕ್ಕೆ ಒತ್ತಾಯ ಮಾಡಲಿ: ಸಿದ್ದರಾಮಯ್ಯ

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೆ ಕೇಂದ್ರ ಸರ್ಕಾರ ಬಡವರಿಗೆ ದ್ರೋಹ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು. ಇನ್ನ ಭಾಗ್ಯ ಬಡವರ ಕಾರ್ಯಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಅಕ್ಕಿ ನೀಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಲಿ ಎಂದು ಆಗ್ರಹಿಸಿದರು.

ಅಕ್ಕಿ ಖರೀದಿಗೆ ಒಪನ್ ಮಾರ್ಕೆಟ್ ನಲ್ಲಿ ಟೆಂಡರ್ ಕರೆಯುತ್ತಿದ್ದೇವೆ. ಜುಲೈ 1 ರಿಂದ ಅಕ್ಕಿ ಕೊಡ್ತೀವಿ ಅಂತ ಹೇಳಿದ್ದೆವು. 5+5 ಹತ್ತು ಕೆ.ಜಿ ಅಕ್ಕಿ‌ಕೊಡುವುದಾಗಿ ಭರವಸೆ ನೀಡಿದ್ದೆವು. 5 ಕೆಜಿ ಕೇಂದ್ರ ಸರ್ಕಾರ ಕೊಡುತ್ತದೆ. ನಾವು 5 ಕೆ.ಜಿ ಅಕ್ಕಿ ಕೊಡಬೇಕು. ಅದರೆ ಅಕ್ಕಿ ದಾಸ್ತಾನು ಇಲ್ಲ ಎಂದರು.

ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ನಮಗೆ 2,29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು. ಪುಡ್ ಸೆಕ್ಯುರಿಟಿ ಆ್ಯಕ್ಟ್ ಅಕ್ಕಿ ಕೊಡುತ್ತೇವೆ ಅಂತ ಹೇಳಿತ್ತು. ಈಗ ಅಕ್ಕಿ ಸಿಗದೇ ಇರುವುದರಿಂದ ಅಕ್ಕಿ ಸಿಗುವವರೆಗೂ ಒಂದು ಕೆ.ಜಿ ಅಕ್ಕಿ ಗೆ 34 ರೂಪಾಯಿ ಕೊಡುತ್ತೇವೆ. ಇದರ ಹಣ ನೇರವಾಗಿ ಅವರ ಅಕೌಂಟ್ ಗೆ ಹಾಕುತ್ತೇವೆ ಎಂದರು.

ಪ್ರತಿಯೊಂದು ಕುಟುಂಬಕ್ಕೆ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಅಕ್ಕಿಗೆ ಹಣ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಪಾರದರ್ಶಕವಾಗಿ ಟೆಂಡರ್ ಕರೆದು ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.

ಇನ್ನು ಇದೇ ಸಂದರ್ಭದಲ್ಲಿ ವರ್ಗಾವಣೆ ದಂಧೆ ವಿಚಾರಕ್ಕೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಟ್ವೀಟ್ ವಿಚಾರವಾಗಿ ಮಾತನಾಡಿ, ಅವರ ಸಮಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರಬೇಕು. ಹೀಗಾಗಿ ಅದನ್ನು ನೆನಪಿಸಿಕೊಂಡು ಕುಮಾರಸ್ವಾಮಿ ಹೇಳಿರಬೇಕು ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಸಂಪುಟ ಸಭೆಯ ಇತರ ನಿರ್ಧಾರಗಳು
*ಬೆಂಗಳೂರು ನಗರದ ಚಂದಾಪುರದಲ್ಲಿ 106 ಕೋಟಿ ರೂ. ಒಳಚರಂಡಿ ಕಾಮಗಾರಿಗೆ ಅನುಮೋದನೆ.
*ಎಸ್ ಸಿ ಎಸ್ ಟಿ ಸಮುದಾಯದವರು ಕಾಮಗಾರಿ ಟೆಂಡರ್ ಮೊತ್ತವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ. ಗೆ ಏರಿಕೆ.
*ಜಿಎಸ್ ಟಿ ವಿಧೇಯಕ ತಿದ್ದುಪಡಿ ಕಾಯ್ದೆ ಅನುಮೋದನೆ
*ನ್ಯಾಯಾಲಯದಲ್ಲಿನ ವಿವಿಧ ಅಪರಾಧ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಪುಟದ ಉಪಸಮಿತಿ ರಚನೆಗೆ ಅನುಮೋದನೆ.‌
*ಕೃಷ್ಣ, ಕಾವೇರಿ, ಮಹದಾಯಿ ಇತರ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನದ ಪರಿಶೀಲನೆ, ನ್ಯಾಯಾಧೀರಣದ ತೀರ್ಪುಗಳ ಅನುಷ್ಠಾನಕ್ಕೆ ಸಚಿವ ಸಂಪುಟ ಉಪಸಮಿತಿ ರಚನೆಗೆ ಅನುಮೋದನೆ.

*ಬೃಹತ್ ಹೂಡಿಕೆಗಳ ಪ್ರಸ್ತಾವನೆಗಳು, ‌ರಿಯಾಯಿತಿ ನೀಡುವ ಸಂಬಂಧ ಸಚಿವ ಸಂಪುಟ ಉಪಸಮಿತಿ ರಚನೆ.
*ಜಂಟಿ ಅಧಿವೇಶನಕ್ಕೆ ರಾಜ್ಯಪಾಲರ ಭಾಷಣದ ಕರಡುಗೆ ಅನುಮೋದನೆ.
*ಕರ್ನಾಟಕ ಸರಕು ಮತ್ತು ಸೇವೆ ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ. ಜಿಎಸ್ ಟಿ ಕೌನ್ಸಿಲ್ ನಿಂದ ಜಿಎಸ್ ಟಿಗೆ ಎರಡು ತಿದ್ದುಪಡಿಗೆ ಅನುಮೋದನೆ ನೀಡುವಂತೆ ಸೂಚಿಸಿತ್ತು.
*ವ್ಯಾಪಾರಿ ಸುಳ್ಳು ಮಾಹಿತಿ ನೀಡಿದರೆ ಸುಳ್ಳನ್ನು ಸತ್ಯ ಎಂದು ಸಾಬೀತು ಮಾಡುವ ಹೊಣೆ ತೆರಿಗೆ ಪಾವತಿದಾರನ ಮೇಲೆ ಇತ್ತು. ಅದರ ಬದಲು ಸರ್ಕಾರ ಮೇಲೆ ಹೊಣೆ ಇರಬೇಕು ಎಂಬ ತಿದ್ದುಪಡಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ