ಚಾಮರಾಜನಗರ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿನ ಲಾಡು ತಯಾರಿಕಾ ಕೇಂದ್ರದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಇಂದು ( ಡಿಸೆಂಬರ್ 1 ) ಲಾಡು ಕೇಂದ್ರದಲ್ಲಿದ್ದ ಸಿಲಿಂಡರ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ಆರಿಸುವಷ್ಟರಲ್ಲಿ ಬೆಂಕಿ ಇತರೆಡೆಗೆ ವ್ಯಾಪಿಸಿದೆ ಎಂದು ವರದಿಯಾಗಿದೆ.
ಲಾಡು ಕೇಂದ್ರದಲ್ಲಿ ಎಣ್ಣೆ ಹಾಗೂ ಜಿಡ್ಡಿನ ಅಂಶ ಹೆಚ್ಚಿದ್ದ ಕಾರಣ ಬೆಂಕಿ ಬಹು ಬೇಗನೆ ಇತರೆಡೆಗೆ ಪಸರಿಸಿದ್ದು, ಬೆಂಕಿಯನ್ನು ಆರಿಸಲು ಪ್ರಾಧಿಕಾರದ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಸದ್ಯ ಲಾಡು ತಯಾರಿಕಾ ಕೇಂದ್ರದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯಾರಿಗೂ ಸಹ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.





