ಬೆಂಗಳೂರು : ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ಸೇತುವೆ ಬಳಿ ನಡೆದಿದೆ. ಲತಾ ಮೃತ ಮಹಿಳೆ. ಕೆಎಸ್ಆರ್ಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಮಹಿಳೆ ಮತ್ತು ಪತಿ ಬೈಕ್ನಲ್ಲಿ ಬಟ್ಟೆ ಅಂಗಡಿಗೆ ಶಾಪಿಂಗ್ಗಾಗಿ ತೆರಳುತ್ತಿದ್ದರು. ಮತ್ತೊಂದು ಬೈಕ್ನಲ್ಲಿ ಪುತ್ರಿ ಕೂಡ ತೆರಳುತ್ತಿದ್ದರು. ಈ ವೇಳೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಇಳಿಯುವ ವೇಳೆ ವೇಗವಾಗಿ ಬಲಕ್ಕೆ ಬಸ್ ಬಂದಿದ್ದು, ಬಸ್ ಹಿಂಬದಿ ದ್ವಿಚಕ್ರ ವಾಹನಕ್ಕೆ ಟಚ್ ಆಗಿ ಇಬ್ಬರು ರಸ್ತೆಗೆ ಬಿದ್ದಿದ್ದಾರೆ.
ಈ ವೇಳೆ ಮಹಿಳೆ ಮೇಲೆ ಬಸ್ ಹರಿದಿದೆ. ಸದ್ಯ ಲತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.





