Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೊಳ್ಳೇಗಾಲದ ಹೊಲೆಯ ಮೂದೇವಿಗಳು ನನ್ನನ್ನು ಸೋಲಿಸಿಬಿಟ್ಟರು: ವಿವಾದಾತ್ಮಕ ಹೇಳಿಕೆ ಕೊಟ್ಟ ಮಾಜಿ ಶಾಸಕ!

ಚಾಮರಾಜನಗರ: ಅಸೆಂಬ್ಲಿಲಿ ನಾನು ಇರ್ಬೇಕಿತ್ತು, ನಾನೊಬ್ಬನೇ ಮಾತನಾಡುತ್ತಿರುವುದು, ಬೇರಾರು ಮಾತನಾಡುತ್ತಿಲ್ಲ. ಆದರೆ ನನ್ನನ್ನು ಕೊಳ್ಳೇಗಾಲ ಹೊಲೆಯ ಮೂದೇವಿಗಳು ಚುನಾವಣೆಯಲ್ಲಿ ಸೋಲಿಸಿಬಿಟ್ಟರು. ಇದು ಕೊಳ್ಳೇಗಾಲದ ಮಾಜಿ ಶಾಸಕ ಎನ್‌. ಮಹೇಶ್‌ ಅವರ ಮಾತಗಳು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿರುವ ೧೫ ಸೆಕೆಂಡ್‌ಗಳ ಈ ವೀಡಿಯೋ ತುಣಕು ಚಾಮರಾಜಗರ ಭಾಗದ ದಲಿತರ ಕೋಪಕ್ಕೆ ಕಾರಣವಾಗಿದೆ.

ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸಿ.ಎನ್‌ ಮಂಜುನಾಥ್‌ ಪರವಾಗಿ ರಾಮನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಈ ಮಾತುಗಳನ್ನು ಆಡಿರುವ ಎನ್‌ ಮಹೇಶ್‌ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಮತಯಾಚನೆ ವೇಳೇ, ಅಸೆಂಬ್ಲಿಯಲ್ಲಿ ದಲಿತರ ಪರವಾಗಿ ನಾನೊಬ್ಬನೇ ಧನಿ ಎತ್ತುತ್ತಿರುವುದು ಆದರೆ, 2023ರ ಚುನಾವಣೆಯಲ್ಲಿ ಹೊಲೆಯ ಮೂದೇವಿಗಳು ನನ್ನನ್ನು ಸೋಲಿಸಿಬಿಟ್ಟರು ಎಂದು ಮೂದಲಿಸಿದ್ದರು. ಈ ಬಗ್ಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದೆ.

ಇನ್ನು ಕೊಳ್ಳೇಗಾಲ ತಾಲೂಕಿನಾದ್ಯಂತ ಅಣ್ಣ ಎನ್‌ ಮಹೇಶ್‌ ವಿರುದ್ಧ ಹಲವಾರು ಸುದ್ಧಿಗೋಷ್ಠಿಗಳು, ಪ್ರತಿಭಟನೆಗಳು ನಡೆಯುತ್ತಿವೆ. ಎಲ್ಲಾ ದಲಿತ ಮುಖಂಡರು ಎನ್‌ ಮಹೇಶ ಹೇಳಿಕೆ ಖಂಡಿಸಿ ಅವರನ್ನು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದ್ದಾರೆ.

ಹೇಳಿಕೆಗೆ ಕ್ಷಮೆಯಾಚಿಸಿದ ಮಾಜಿ ಶಾಸಕ ಎನ್‌ ಮಹೇಶ್‌: ಮಾಜಿ ಶಾಸಕ ಎನ್‌. ಮಹೇಶ್‌ ಹೇಳಿಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆ, ಇದರಿಂದ ಏ.೨೬ ರಂದು ನಡೆಯುವ ಚುನಾವಣೆಗೆ ತೊಡಕಾಗಬಹುದು ಎಂದು ಮನಗಂಡ ಮಹೇಶ್‌ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

ಈ ಸಂಬಂಧ ನಿನ್ನೆ (ಏ.೨೧) ರಾತ್ರಿ ಫೇಸ್‌ಬುಕ್‌ ಲೈವ್‌ನಲ್ಲಿ ಬಂದು ಮಾತನಾಡಿರುವ ಅವರು, ನಮ್ಮವರು ಎಂಬ ಹಕ್ಕಿನಿಂದಾಗಿ ನಾನು ಈ ರೀತಿ ಮಾತನಾಡಿದ್ದೇನೆ. ಇದರಿಂದ ನಿಮಲ್ಲರಿಗೂ ನೋವಾಗಿದ್ದರೇ ಕ್ಷಮೆ ಕೇಳುತ್ತೇನೆ. ನಾನು ಇಂತಹ ಅವಮಾನವನ್ನು ನಿನ್ನೆ ಮೊನ್ನೆಯಿಂದ ಅನುಭವಿಸುತ್ತಿಲ್ಲ. ಕಳೆದ ೨೦ ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದೇನೆ. ಆದರೆ, ಈ ಎಲ್ಲಾ ಅವಮಾನವನ್ನು ನನಗೆ ನೀಡಿದವರು ನಮ್ಮವರೇ ಹೊರತು ಬೇರಾರು ಅಲ್ಲಾ ಎಂದು ಹೇಳಿದ್ದಾರೆ.

Tags: