Mysore
25
few clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಕೋಲಾರ| ಮರ್ಯಾದಾ ಹತ್ಯೆ ಪ್ರಕರಣ: ಕರ್ತವ್ಯಲೋಪವೆಸಗಿದ ಪೋಲಿಸ್​ ಅಮಾನತು

ಕೋಲಾರ: ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿದ ಹಿನ್ನೆಲೆ ಕಾಮಸಮುದ್ರ ಪೊಲೀಸ್ ವೃತ್ತ ನಿರೀಕ್ಷಕ ಪಿ.ಜೆ.ಮಧುಕರ್​​ನ್ನು ಅಮಾನತುಗೊಳಿಸಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಭಾನುವಾರ ಆದೇಶ ಹೊರಡಿಸಿದ್ದಾರೆ.

ಜೂನ್ 27ರಂದು ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿತ್ತು. ಮರ್ಯಾದಾ ಹತ್ಯೆ ಪ್ರಕರಣದ ತನಿಖೆಯಲ್ಲಿ ಸಿಪಿಐ ಲೋಪವೆಸಗಿದ್ದರು. ಕಾಮಸಮುದ್ರ ಸಿಪಿಐ ಮಧುಕರ್​​ ಅಮಾನತುಗೊಳಿಸಿ ಐಜಿಪಿ ಆದೇಶ ಹೊರಡಿಸಲಾಗಿದೆ.

ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಮಗಳನ್ನು ತಂದೆಯೇ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಇತ್ತ ತಾನು ಪ್ರೀಸಿದ ಹುಡುಗಿ ಮೃತಪಟ್ಟಿದ್ದಾಳೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಗಾಬರಿಗೊಂಡ ಯುವಕ ತಾನೂ ಕೂಡ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.

ಬೋಡಗುರ್ಕಿ ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ ಕೃಷ್ಣಮೂರ್ತಿ ಎಂಬುವರ ಮಗಳು ಕೀರ್ತಿ (20) ಕೆಜಿಎಫ್​ನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ಅದೇ ಗ್ರಾಮದ ಪರಿಶಿಷ್ಟ ಜನಾಂಗಕ್ಕೆ ಸೇರಿದ ಗಂಗಾಧರ್​ ಎಂಬ ಯುವಕನನ್ನು ಇತ್ತೀಚೆಗೆ ಪ್ರೀತಿಸುತ್ತಿದ್ದಾಳೆ ಎನ್ನುವ ವಿಚಾರ ಗ್ರಾಮದಲ್ಲಿ ತಿಳಿದಿತ್ತು.

ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಅಲ್ಲದೆ ಯುವತಿಗೆ ಬುದ್ದಿ ಹೇಳುವ ಕೆಲಸ ಕೂಡ ನಡೆದಿತ್ತಾದರೂ ಯವತಿ ತಂದೆ ತಾಯಿಯ ಮಾತನ್ನು ಧಿಕ್ಕರಿಸಿ ಆತನನ್ನೇ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಹಾಗಾಗಿ ಯುವತಿ ತಂದೆ ಕೃಷ್ಣಮೂರ್ತಿ ಮಗಳನ್ನು ಕುತ್ತಿಗೆ ಹಿಸುಕಿ ಸಾಯಿಸಿದ್ದರು.

ತಾನು ಪ್ರೀತಿಸುತ್ತಿದ್ದ ಹುಡುಗಿ ಮೃತಪಟ್ಟ ವಿಚಾರ ತಿಳಿದು ಗಾಬರಿಗೊಂಡ ಯುವಕ, ಓಡಿ ಹೋಗಿ ಕಾಮಸಮುದ್ರ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ತಾನು ಆತ್ಮಹತ್ಯೆಗೆ ಶರಣಾಗಿದ್ದ. ವಿಷಯ ತಿಳಿದು ಗ್ರಾಮಕ್ಕೆ ಬೇಟಿ ನೀಡಿರುವ ಕಾಮಸಮುದ್ರ ಪೊಲೀಸರು ಆರೋಪಿ ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!