Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮಲೇಷಿಯಾ ಸರ್ಕಾರದ ಗಮನ ಸೆಳೆದ‌ ಕರ್ನಾಟಕದ ಪಡಿತರ ವ್ಯವಸ್ಥೆ

ಬೆಂಗಳೂರು : ಕರ್ನಾಟಕದ ಪಡಿತರ ವ್ಯವಸ್ಥೆ ಇದೀಗ ಮಲೇಷಿಯಾ ಸರ್ಕಾರದ ಗಮನ ಸೆಳೆದಿದ್ದು, ಈ ನಿಟ್ಟಿನಲ್ಲಿ ಅಧ್ಯಯನ ಮಾಡಲು ಮಲೇಷಿಯಾದ ಉಪ ಸಚಿವರ ನಿಯೋಗ ರಾಜ್ಯಕ್ಕೆ ಆಗಮಿಸಿದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ ಅವರನ್ನು ಬುಧವಾರ ಭೇಟಿಯಾದ ನಿಯೋಗದಲ್ಲಿ ಮಲೇಷಿಯಾದ ಉಪ ಸಚಿವರಾದ ವೈ.ಬಿ.ಸನತೇರ್ ಪುವನ್, ಹಜಾಯ್ ಪುಜಿಯಾ, ಬಿನಿಟಿ ಸಲೇಹ್ ಕುಮಾರಕೃಪ ಅತಿಥಿ ಗೃಹದಲ್ಲಿ ಚರ್ಚೆ ನಡೆಸಿದರು.

ರಾಜ್ಯದ ಆಹಾರ ಇಲಾಖೆಯಲ್ಲಿ ಯಾವ ರೀತಿಯಾದ ವ್ಯವಸ್ಥೆಗಳಿಂದ ಗ್ರಾಹಕರಿಗೆ ಆಹಾರ ಪದಾರ್ಥಗಳನ್ನು ತಲುಪಿಸಲಾಗುತ್ತಿದೆ ಮತ್ತು ಪಡಿತರ ಕಾರ್ಡ್ ಗಳನ್ನು ಯಾವ ಮಾದರಿಯಾಗಿ ಜನರಿಗೆ ನೀಡುತ್ತೀರಾ? ಎಂಬ ಮಾಹಿತಿಗಳನ್ನು ಮಲೇಷಿಯಾ ಸರ್ಕಾರದ ನಿಯೋಗ ಪಡೆದುಕೊಂಡಿದೆ.

ರಾಜ್ಯಕ್ಕೆ ಭೇಟಿ ನೀಡಿರುವ ಮಲೇಷಿಯಾದ ಸಚಿವರ ನಿಯೋಗ ಪಡಿತರ ವ್ಯವಸ್ಥೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದೆ. ಇನ್ನೂ ಎರಡು ದಿನಗಳು ಬೆಂಗಳೂರಿನಲ್ಲಿಯೇ ಉಳಿಯಲಿದ್ದು ಅಕ್ಕಿಯ ದಾಸ್ತಾನು ಗೊಡೌನ್‌ ಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿ ಅವರ ದೇಶದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸುಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ