Mysore
25
light rain

Social Media

ಭಾನುವಾರ, 03 ನವೆಂಬರ್ 2024
Light
Dark

ಕರ್ನಾಟಕಕ್ಕೆ ಮತ್ತೆ ಹಿನ್ನಡೆ; ಡಿಸೆಂಬರ್‌ ಅಂತ್ಯದವರೆಗೂ ಇಷ್ಟು ಕ್ಯೂಸೆಕ್ ನೀರು ಹರಿಸಲು ಸೂಚನೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಪದೇ ಪದೇ ಹಿನ್ನಡೆ ಆಗುತ್ತಲೇ ಇದೆ. ಇಂದು ( ನವೆಂಬರ್‌ 23 ) ಹೊಸದೊಂದು ಆದೇಶ ಹೊರಡಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಡಿಸೆಂಬರ್‌ ಅಂತ್ಯದವರೆಗೂ ಕರ್ನಾಟಕ ತಮಿಳುನಾಡಿಗೆ ದಿನನಿತ್ಯ 2700 ಕ್ಯೂಸೆಕ್‌ ನೀರನ್ನು ಹರಿಸಬೇಕು ಎಂದಿದೆ.

ಇಂದಿನಿಂದ ( ನವೆಂಬರ್‌ 23 ) ಡಿಸೆಂಬರ್‌ 23 ರ ತನಕ ಸರಿಯಾಗಿ ಒಂದು ತಿಂಗಳ ಕಾಲ ಪ್ರತಿನಿತ್ಯ 2700 ಕ್ಯೂಸೆಕ್‌ ನೀರನ್ನು ಹರಿಸಬೇಕು ಎಂದು ಆದೇಸ ಬಂದಿದೆ. ಈಗಾಗಲೇ ಮಳೆ ಇಲ್ಲದೇ ಇಲ್ಲಿನ ಬೆಳೆಗಳಿಗೆ ನೀರಿನ ಅಭಾವ ಎದುರಿಸುತ್ತಿರುವ ಕರ್ನಾಟಕ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಯೋಚಿಸುತ್ತಿರುವಾಗಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂಥದ್ದೊಂದು ಆದೇಶ ಹೊರಡಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೆಆರ್‌ಎಸ್‌ನಲ್ಲಿ ಇಲ್ಲ ನೀರು 

ಒಂದೆಡೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಇಂಥ ಆದೇಶವನ್ನೇನೋ ನೀಡಿದೆ. ಆದರೆ ಕೃಷ್ಣ ರಾಜ ಸಾಗರ ಅಣೆಕಟ್ಟೆಯಲ್ಲಿ ಕೇವಲ 99 ಅಡಿ ನೀರಿದೆ. ಕೆಲ ದಿನಗಳ ಹಿಂದಷ್ಟೇ 100 ಅಡಿ ಮುಟ್ಟಿದ ಖುಷಿಯಲ್ಲಿದ್ದ ಜನರಿಗೆ ನೀರು ನೂರು ಅಡಿಗಿಂತ ತಗ್ಗಿದ ಸುದ್ದಿಯ ಜತೆ ಇದೀಗ ಮತ್ತೆ ನೀರು ಬಿಡಬೇಕೆಂಬ ಸುದ್ದಿ ಮತ್ತಷ್ಟು ಪೆಟ್ಟು ನೀಡಿದೆ.

ನೀರು ಎಷ್ಟಿದೆ? 

124.80 ಅಡಿಗಳಷ್ಟು ಸಾಮರ್ಥ್ಯವಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಇಂದು 99.10 ಅಡಿ ನೀರು ಇದ್ದು 1450 ಕ್ಯೂಸೆಕ್‌ ನೀರಿನ ಒಳಹರಿವಿದೆ ಹಾಗೂ 3840 ಕ್ಯೂಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಈ ಹೊರಹರಿವು ಚಾನಲ್‌ಗಳಿಗೆ ಬಿಡುವ ನೀರು ಹಾಗೂ ಕುಡಿಯುವ ನೀರಿಗಾಗಿ ಹೊರಬಿಡುವ ನೀರಿನ ಪ್ರಮಾಣವನ್ನೂ ಸಹ ಒಳಗೊಂಡಿದೆ. 49.482 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 22.113 ಟಿಎಂಸಿ ನೀರಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ