ಬೆಂಗಳೂರು: ರಾಜ್ಯದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರದ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಪೆಟ್ರೋಲ್ ಮೇಲಿನ ವ್ಯಾಟ್‌ನ್ನು ಶೇ. 25.92 ರಿಂದ ಶೇ 29.84 ಕ್ಕೆ ಹೆಚ್ಚಿಸಿ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 14.34 ರಿಂದ 18.44ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಸೂಚಿಸಿದೆ.
ಇನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಉಲ್ಲೇಖಿಸಿರುವಂತೆ ಶನಿವಾರ ಹೊರಡಿಸಲಾದ ಪತ್ರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ. 3.03 ಹಾಗೂ ಡೀಸೆಲ್‌ಗೆ ರೂ. 3.02 ಹೆಚ್ಚಿಸಲಾಗಿದೆ.