Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಪ್ರತಿಷ್ಠಿತ ʼಸಿಲ್ವರ್‌ ಪೀಕಾಕ್‌ ಅವಾರ್ಡ್‌ʼ ಮುಡಿಗೇರಿಸಿಕೊಂಡ ಕಾಂತಾರ; ಕನ್ನಡ ಚಿತ್ರರಂಗದ ಪಾಲಿಗಿದು ದಾಖಲೆ

ನಿನ್ನೆ (ನವೆಂಬರ್‌ 27) ಕಾಂತಾರ ಚಾಪ್ಟರ್‌ 1ರ ಫಸ್ಟ್‌ಲುಕ್ ಟೀಸರ್‌ ಬಿಡುಗಡೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಕಾಂತಾರ ಚಿತ್ರತಂಡ ಇಂದು ( ನವೆಂಬರ್‌ 28 ) ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಇಂಡಿಯಾದಲ್ಲಿ ಸಿಲ್ವರ್‌ ಪೀಕಾಕ್‌ ಅವಾರ್ಡ್‌ ಅನ್ನು ಬಾಚಿಕೊಂಡಿದೆ.

54ನೇ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಇಂಡಿಯಾ ಪ್ರಶಸ್ತಿ ಪ್ರದಾನ ಇಂದು ನಡೆದಿದ್ದು ʼಸ್ಪೆಷಲ್‌ ಜ್ಯೂರಿʼ ಕೆಟಗರಿ ಅಡಿಯಲ್ಲಿ ರಿಷಬ್‌ ಶೆಟ್ಟಿ ತಮ್ಮ ಕಾಂತಾರ ಚಿತ್ರಕ್ಕಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಕುರಿತು ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಐಎಫ್‌ಎಫ್‌ಐ “ಸ್ಪೆಷಲ್‌ ಜ್ಯೂರಿಯಿಂದ ಗುರುತಿಸಿಕೊಳ್ಳುವುದು ಯಾವಾಗಲೂ ಮಹತ್ವದ್ದಾಗಿದ್ದು ಈ ವರ್ಷ ರಿಷಬ್‌ ಶೆಟ್ಟಿ ತಮ್ಮ ಕಾಂತಾರ ಚಿತ್ರಕ್ಕಾಗಿ ಈ ಸ್ಪೆಷಲ್ ಜ್ಯೂರಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಎಂಥಹ ಘಳಿಗೆ ಇದು” ಎಂದು ಬರೆದುಕೊಂಡಿದೆ.

ಇನ್ನು ಈ ಕುರಿತು ಕಾಂತಾರ ಚಿತ್ರದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ಸಹ ಬರೆದುಕೊಂಡಿದ್ದು “ಕಾಂತಾರ ಚಿತ್ರ ಸಿಲ್ವರ್ ಪೀಕಾಕ್‌ ಅವಾರ್ಡ್‌ ಗೆದ್ದ  ಕನ್ನಡದ ಮೊದಲ ಚಿತ್ರ ಎಂಬ ಹೊಸ ಅಧ್ಯಾಯವನ್ನು ಬರೆದಿದೆ ಎಂಬುದನ್ನು ಹೇಳಿಕೊಳ್ಳಲು ಹೆಮ್ಮೆಪಡುತ್ತೇವೆ” ಎಂದು ಉಲ್ಲೇಖಿಸಿದೆ. ಈ ಮೂಲಕ ಕಾಂತಾರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

ಇನ್ನು ಕಾಂತಾರ ಚಿತ್ರ ಮೊದಲು ಸಿಲ್ವರ್‌ ಪೀಕಾಕ್‌ ಪ್ರಶಸ್ತಿ ಗೆದ್ದ ದಾಖಲೆ ಬರೆದಿದ್ದರೆ, 1978ರಲ್ಲಿ ಶಂಕರ್‌ ನಾಗ್‌ ʼಒಂದಾನೊಂದು ಕಾಲದಲ್ಲಿʼ ಚಿತ್ರಕ್ಕಾಗಿ ʼಸಿಲ್ವರ್‌ ಪೀಕಾಕ್‌ ಅತ್ಯುತ್ತಮ ನಟ ಪ್ರಶಸ್ತಿʼ ಗೆದ್ದಿದ್ದರು. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ