Mysore
21
mist

Social Media

ಶುಕ್ರವಾರ, 02 ಜನವರಿ 2026
Light
Dark

ಸುಮ್ಮನೆ ಕುಳಿತುಕೊಳ್ಳಿ ಇಲ್ಲವಾದರೆ ಹೊರಹೋಗಿ : ಖರ್ಗೆ ಗರಂ

ತೆಲಂಗಾಣ : ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಳ್ಮೆ ಕಳೆದುಕೊಂಡಿದ್ದಾರೆ.

ಚುನಾವಣಾ ಪ್ರಚಾರ ಸಭೆಯ ವೇಳೆ ಕಾರ್ಯಕರ್ತರು ವಿವಿಧ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದು, ಸುಮ್ಮನೆ ಕುಳಿತುಕೊಳ್ಳಿ ಇಲ್ಲವಾದರೆ ಹೊರ ಹೋಗಿ ನಿಮ್ಮ ಬಾಯಿಗೆ ಏನು ಬರುತ್ತದೆ ಅದನ್ನು ಬೊಗಳುವುದಲ್ಲ ಎಂದು ವಾಗ್ದಾಳಿ ನಡೆಸಿದ್ದಲ್ಲದೆ, ಸಭಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ ಹಂಚಿಕೊಂಡಿದ್ದು, ಕಾಂಗ್ರೆಸ್‌ ಅಧ್ಯಕ್ಷರು ತಮ್ಮ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಪಕ್ಷದ ಮುಖ್ಯಸ್ಥರಾಗಿದ್ದರೂ ಕಾಂಗ್ರೆಸ್‌ ಕಾರ್ಯಕರ್ತರು ಅವರಿಗೆ ಸಲ್ಲಬೇಕಾದ ಗೌರವವನ್ನು ನೀಡುತ್ತಿಲ್ಲ ಸಭೆಯಲ್ಲಿ ಖರ್ಗೆಯವರಿಗೆ ಅವಮಾನವಾಗಿದೆ ಎಂದು ಬರೆದುಕೊಂಡಿದ್ದಾರೆ.

ರಾಜಸ್ಥಾನ ಚುನಾವಣ ಪ್ರಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಭಾಗಿಯಾಗಿರುವ ಫೋಟೋಗಳು ಕಣ್ಮರೆಯಾಗಿವೆ. ಗೆಹ್ಲೋಟ್‌ ಹಾಗೂ ರಾಹುಲ್‌ ಗಾಂಧಿಯವರ ಫೋಟೊಗಳನ್ನು ಹೆಚ್ಚಾಗಿ ಪೋಸ್ಟ್‌ ಮಾಡಿದ್ದಾರೆ. ಖರ್ಗೆಯವರು ದಲಿತ ಎಂಬ ಕಾರಣಕ್ಕೆ ಕಾಂಗ್ರೆಸ್‌ ಅವರನ್ನು ನಿಂದಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ ಹಂಚಿಕೊಂಡಿವ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. ಅಮಿತ್‌ ಮಾಳವಿಯ ಹಂಚಿಕೊಂಡಿರುವ ವಿಡಿಯೋದಲ್ಲಿ ವೇದಿಕೆಯಲ್ಲಿ ಮಲಿಲಿಕಾರ್ಜುನ ಖರ್ಗೆ ಮಾತನಾಡಲು ಆರಂಭಿಸುತ್ತಿದ್ದಂತೆ, ಕಾರ್ಯಕರ್ತರು ಕೆಲ ಗೋಷಣೆಗಳನ್ನು ಕೂಗಿದ್ದಾರೆ. ಇದರಿಂದ ಖರ್ಗೆಯವರು ಸಿಟ್ಟಿಗೆದ್ದಿದ್ದಾರೆ. ಕೆಲಹೊತ್ತು ಇದನ್ನು ಸಹಿಸಿಕೊಂಡ ಖರ್ಗೆ ನೇರವಾಗಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.

ಸುಮ್ಮನೆ ಕುಳಿತುಕೊಳ್ಳಿ. ನಿಮಗೆ ಕೇಳಲು ಆಗುತ್ತಿಲ್ಲ ಎಂದಾದರೆ ಹೊರನಡೆಯಿರಿ. ನಿಮಗೆ ನ್ಯಾಷನಲ್‌ ನಾಯಕನೊಬ್ಬ ಮಾತನಾಡುತ್ತಿರುವುದು ಕಾಣಿಸುತ್ತಿಲ್ಲವೇ ? ನಿಮ್ಮ ಬಾಯಿಗೆ ಏನು ಬರುತ್ತದೆ ಅದನ್ನು ಬೊಗಳುವುದಲ್ಲ ಕೇಳುವುದಾದರೆ ಕೇಳಿ ಇಲ್ಲಾ ಜಾಗ ಖಾಲಿ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!