ಬೆಂಗಳೂರು : ಜೆಡಿಎಸ್ ಜಾತ್ಯತೀತ ಎಂಬ ಟ್ಯಾಗ್ ತೆಗೆಯಬೇಕಾದ ಅಗತ್ಯವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಸಭೆಗೆ ತಮ್ಮ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನಡುವೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ , ಜೆಡಿಎಸ್‌ಗೆ ಜಾತ್ಯತೀತ ರಾಜಕೀಯದಲ್ಲಿ ನಿಜವಾಗಿ ನಂಬಿಕೆಯಿಲ್ಲ ಎಂಬುದು ನಮಗೆ ತಿಳಿದಿದೆ. ಅವರು ಹಿಂದೆಯೂ ಕೂಡಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾಗೀ ಇದೇನೂ ಹೊಸದಲ್ಲ. ಜನತಾ ದಳ ಜಾತ್ಯತೀತ ಎಂಬ ಟ್ಯಾಗ್ ತೆಗೆಯಬೇಕಾದ ಅಗತ್ಯವಿದೆ ಎಂದರು.
ಜೆಡಿಎಸ್ ನವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅವರಿಗೆ ಯಾವುದೇ ತತ್ವ, ಸಿದ್ಧಾಂತಗಳಿಲ್ಲ. ಕುಮಾರಸ್ವಾಮಿ ಅವರಿಗೆ ಅಧಿಕಾರ ಮಾತ್ರ ಮುಖ್ಯ. ಇದು ಕರ್ನಾಟಕದಲ್ಲಿ ಜೆಡಿಎಸ್ ಮೇಲೆ ಆಳವಾದ ಪರಿಣಾಮ ಬೀರಲಿದ್ದು, ಅಂತ್ಯವೂ ಆಗಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
#WATCH | On Opposition meeting in Bengaluru, Karnataka Congress leader Dinesh Gundu Rao says, "…We know that for JD(S), secular politics is something which they don't truly believe in. They have always had alliances with BJP even before. So, this is nothing new. I think the tag… https://t.co/viPyZp2NIz pic.twitter.com/JIdNbsYItB
— ANI (@ANI) July 17, 2023





