ಬೆಂಗಳೂರು : ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈನ್ಸಾಲ್ ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲ ನಡೆದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ.
ಕೇವಲ 13 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಜೈಸ್ವಾಲ್ ಐಪಿಎಲ್ ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.
ಕನ್ನಡಿಗ ಕೆ.ಎಲ್ ರಾಹುಲ್ ಅವರು ಈ ಹಿಂದೆ 2018ರಲ್ಲಿ ಡೆಲ್ಲಿ ತಂಡದ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, ದಾಖಲೆ ನಿರ್ಮಿಸಿದ್ದರು. 2022ರಲ್ಲಿ ಬ್ಯಾಟ್ ಕಮಿನ್ಸ್ ಅವರು ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಐಪಿಎಲ್ ನಲ್ಲಿ ವೇಗದ ಅರ್ಧಶತಕಗಳು
ಯಶಸ್ವಿ ಜೈಸ್ವಾಲ್ : 13 ಎಸೆತಗಳು (ಕೋಲ್ಕತ್ತಾ)
ಕೆ.ಎಲ್.ರಾಹುಲ್ : 14 ಎಸೆತಗಳು (ಡೆಲ್ಲಿ
ಪ್ಯಾಟ್ ಕಮಿನ್ಸ್: 14 ಎಸೆತಗಳು (ಮುಂಬೈ)
ಯುಸೂಫ್ ಪಠಾಣ್ : 15 ಎಸೆತಗಳು (ಹೈದರಾಬಾದ್)
ಸುನಿಲ್ ನರೈನ್ : 15 ಎಸೆತಗಳು (ಆರ್‌ಸಿಬಿ) ನಿಕೋಲಸ್ ಪೂರನ್ : 15 ಎಸೆತಗಳು (ಆರ್‌ಸಿಬಿ)
ಸುರೇಶ್ ರೈನಾ : 16 ಎಸೆತಗಳು (ಪಂಜಾಬ್)
ಇಶಾನ್ ಕಿಶನ್ : 16 ಎಸೆತಗಳು (ಹೈದರಾಬಾದ್