ಬೆಂಗಳೂರು : ಕುಮಾರಸ್ವಾಮಿ ಅವರೆ ದಾರಿ ತಪ್ಪಿರುವುದು ರಾಜ್ಯದ ಹೆಣ್ಣು ಮಕ್ಕಳಲ್ಲ ನಿಮ್ಮ ಮನೆಯ ಮಗ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೀಡಿದ್ದ ʼರಾಜ್ಯದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆʼ ಎಂಬ ಹೇಳಿಕೆಗೆ ಮರುತ್ತರ ನಿಡಿರುವ ಅವರು ರಾಜ್ಯದಲ್ಲಿ ದಾರಿ ತಪ್ಪಿರುವುದು ಹೆಣ್ಣು ಮಕ್ಕಳಲ್ಲ ನಿಮ್ಮ ಮನೆಯ ಮಗ ಎಂದಿದ್ದಾರೆ.
ಅಮಾಯಕ ಮಹಿಳೆಯರನ್ನು ನೀವು ಹೀಗೆ ಶೋಷಣೆ ಮಾಡಿ, ಅವ ಅಮಾಯಕತನ, ಬಡತನ ಹಾಗೂ ಕಷ್ಟದ ಪರಿಸ್ಥಿತಿಯ ಲಾಭ ತೆಗೆದುಕೊಂಡು ಇಡೀ ಪ್ರಪಂಚದ ದೊಡ್ಡ ಲೈಂಗಿಕ ಹಗರಣ ಮಾಡಿದ್ದೀರ. ಈಗ ಹೇಳಿ ಯಾರು ದಾರಿ ತಪ್ಪಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರೆ, ಕುಮಾರಸ್ವಾಮಿ ಅವರೆ, ಭವಾನಿ ರೇವಣ್ಣ ಅವರೆ ರಾಜ್ಯದ ಜನತೆಗೆ ಉತ್ತರ ನೀಡಿ. ನಿಮ್ಮ ಮನೆಯಲ್ಲಿ ನಡೆಯುತ್ತಿರುವ ಈ ಕೃತ್ಯಕ್ಕೆ ಬೆಂಬಲ ನೀಡುವ ಮೂಲಕ ಈ ಪ್ರಕರಣದಲ್ಲಿ ನೀವು ಭಾಗಿಯಾಗಿದ್ದೀರಿ ಎಂದು ಆರೋಪಿಸಿದರು.