ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ ಮುಕ್ತಾಯವಾಗಿದ್ದು, ಚುನಾವಣೆಗೂ ಮುನ್ನ ನೀಡಿದ್ದ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ರಸ್ತೆಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕೊಡಲು ಆಗಲ್ಲ. ಯಾರಿಗೆ ಕೊಡಬೇಕು, ಅವರ ಹೆಸರಿನಲ್ಲಿ ಖಾತೆ ಇದೆಯಾ ಎಂದು ನೋಡಿ ನಂತರ ಆದೇಶ ಹೊರಡಿಸಲಾಗುತ್ತೆ ಎಂದು ಕಾಂಗ್ರೆಸ್ ಗ್ಯಾರಂಟಿ ಕುರಿತಂತೆ ಸ್ಪಷ್ಟಪಡಿಸಿದ್ದಾರೆ.
ಐದು ಗ್ಯಾರಂಟಿಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಆಗಿದೆ. ಅದನ್ನು ಜಾರಿ ಮಾಡುವ ಆದೇಶ ಬರುವ ಕ್ಯಾಬಿನೆಟ್ ನಲ್ಲಿ ನೀಡಲಾಗುತ್ತದೆ. ಯಾವೆಲ್ಲ ನಿಯಮ, ಮಾನದಂಡ, ಇನ್ ಡೀಟೈಲ್ಸ್ ಆಗಿ ಬರುವ ಕ್ಯಾಬಿನೆಟ್ ನಲ್ಲಿ ಆದೇಶ ಹೊರಡಿಸಲು ನಿರ್ಧಾರ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.





