Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಭಾರತದ ಆಂತರಿಕ ವಿಷಯಗಳಲ್ಲಿ ಪಾಕಿಸ್ತಾನ ಮೂಗು ತೂರಿಸದೆ ಇರುವುದು ಒಳಿತು: ವಿಶ್ವಸಂಸ್ಥೆ

ನ್ಯೂಯಾರ್ಕ್ : ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ ಪಾಕಿಸ್ತಾನಕ್ಕೆ ಭಾರತ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿದೆ. ಭಾರತದ ಆಂತರಿಕ ವಿಷಯಗಳಲ್ಲಿ ಪಾಕಿಸ್ತಾನ ಮೂಗು ತೂರಸದೆ ಇರುವುದು ಒಳಿತು ಎಚ್ಚರಿಕೆ ಸಂದೇಶ ರವಾನಿಸಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಮಿಷನ್‍ನ ಸಲಹೆಗಾರರಾದ ಆರ್ ಮಧು ಸೂದನ್ ಪ್ರತಿಕ್ರಿಯೆ ನೀಡಿ, ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶದೊಂದಿಗೆ ಗುರುತಿಸಿಕೊಳ್ಳುವ ಅಗತ್ಯವಿಲ್ಲ ಎಂದು ನೇರವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.

ನಿಮ್ಮ ದೇಶದ ಸ್ವಂತ ವಿಷಯಗಳ ಬಗ್ಗೆ ಗಮನ ಹರಿಸಿ ಭಾರತದ ವಿಷಯಗಳ ಬಗ್ಗೆ ನಿಮಗೆ ಕಾಳಜಿ ಬೇಡ. ನಿಮ್ಮ ಸಮಸ್ಯೆಯನ್ನು ನೀವು ಸರಿ ಪಡಿಸಿಕೊಳ್ಳಿ ಎಂದಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ಸಮಸ್ಯೆ ಪ್ರಸ್ತಾಪ ಮಾಡುವ ಬದಲು ತನ್ನ ಆಂತರಿಕ ವ್ಯವಹಾರಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಮತ್ತು ತಮ್ಮದೇ ಆದ ಗಡಿಗಳನ್ನು ಪುನಃಸ್ಥಾಪಿಸಿ ಎಂದು ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.

ಸಶಸ್ತ್ರ ಸಂಘರ್ಷದಲ್ಲಿ ನಾಗರಿಕರ ರಕ್ಷಣೆ’ ಕುರಿತು ಮುಕ್ತ ಚರ್ಚೆಯಲ್ಲಿ ಮಾತ£ ಆರ್ ಮಧು ಸೂದನ್, “ಈ ಮಂಡಳಿಯ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಲು, ಸಂಬಂಧಪಟ್ಟ ನಿಯೋಗ ಅವರ ಆಂತರಿಕ ವಿಷಯಗಳನ್ನು ಪರಿಹರಿಸಲು ಮತ್ತು ಮರುಸ್ಥಾಪಿಸಲು ಕೇಂದ್ರೀಕರಿಸಲು ಸಲಹೆ ನೀಡುತ್ತೇನೆ ಎಂದಿದ್ದಾರೆ.

ನನ್ನ ದೇಶದ ವಿರುದ್ಧ ಕ್ಷುಲ್ಲಕ ಆರೋಪಗಳನ್ನು ಮಾಡುವುದಕ್ಕಿಂತ ಪಾಕಿಸ್ತಾನ ಅವರ ಸ್ವಂತ ಗಡಿ ರಕ್ಷಣೆ ಮಾಡಿಕೊಳ್ಳಲು ಗಮನ ಹರಿಸುವುದು ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ.

ಆಹಾರ ಅಭದ್ರತೆಯ ಕುರಿತಾದ ಯುಎನ್‍ಎಸ್‍ಸಿಯ ಮುಕ್ತ ಚರ್ಚೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಯೊಬ್ಬರು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ. “ದುರದೃಷ್ಟವಶಾತ್, ಆಹಾರ ಭದ್ರತೆಯ ಪ್ರಮುಖ ವಿಷಯದಿಂದ ಈ ಮಂಡಳಿಯ ಗಮನವನ್ನು ಬೇರೆಡೆಗೆ ತಿರುಗಿಸಲು ನಿಯೋಗ ಮತ್ತೊಮ್ಮೆ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿರುವುದನ್ನು ನೋಡಿದ್ದೇವೆ” ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ