Mysore
27
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮತದಾರರಿಗೆ ಆಮಿಷವೊಡ್ಡುವವರ ಮೇಲೆ ಐಟಿ ಕಣ್ಣು

ಬೆಂಗಳೂರು:ಮತದಾರರ ಮೇಲೆ ಚುನಾವಣಾ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಆಸೆ, ಆಮಿಷವೊಡ್ಡುವವರ ಮೇಲೆ ಹದ್ದಿನ ಕಣ್ಣಿಟ್ಟಿರುವ ಆದಾಯ ತೆರಿಗೆ(ಐಟಿ) ಇಲಾಖೆ ಅಧಿಕಾರಿಗಳು ದೂರು ಸ್ವೀಕರಿಸಲು ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್)ತೆರೆದಿದ್ದಾರೆ.
ಪ್ರಾಯಶಃ ಇದೇ ಮೊದಲ ಬಾರಿಗೆ ಐಟಿ ಅಕಾರಿಗಳು ಸಾರ್ವಜನಿಕರಿಂದ ದೂರು ಸ್ವೀಕರಿಸಲು ಕಂಟ್ರೋಲ್ ರೂಮ್ ಪ್ರಾರಂಭಿಸಿದ್ದು, ಮೊಬೈಲ್, ದೂರವಾಣಿ ಸಂಖ್ಯೆ ಹಾಗೂ ಟೋಲ್ ಫ್ರೀ ಸಂಖ್ಯೆಯನ್ನು ಪ್ರಾರಂಭಿಸಿದೆ.
ದಿನದ 24 ಗಂಟೆಯೂ ಇದು ಕಾರ್ಯ ನಿರ್ವಹಿಸಲಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ನೇತಾರರು ಬಂಗಾರ, ಮದ್ಯ, ನಗದು ಸೇರಿದಂತೆ ಯಾವುದೇ ರೀತಿಯಲ್ಲೂ ಆಮಿಷವೊಡ್ಡಿದರೆ ದೂರು ನೀಡಬೇಕೆಂದು ಆದಾಯ ತೆರಿಗೆ ಇಲಾಖೆ ಅಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ದೂರು ನೀಡುವವರ ಹೆಸರುಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಸ್ಪಷ್ಟಪಡಿಸಿರುವ ಐಟಿ, ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಚುನಾವಣೆ ನಡೆಯಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಮನವಿ ಮಾಡಿದೆ.
ದೂರು ಕೊಡುವವರು ಟೋಲ್ ಫ್ರೀ ಸಂಖ್ಯೆ 1800-425-2115 ಅದೇ ರೀತಿ ದೂರವಾಣಿ ಸಂಖ್ಯೆ 080-22861126 ಜೊತೆಗೆ ಮೊಬೈಲ್ ಸಂಖ್ಯೆ 8277422825 ಹಾಗೂ 8277413614 ಸಂಪರ್ಕಿಸಬಹುದೆಂದು ಕೋರಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!