Mysore
20
overcast clouds
Light
Dark

ಇಸ್ರೋ ಮತ್ತೊಂದು ಸಾಧನೆ: ಗಮ್ಯಸ್ಥಾನ ತಲುಪಿದ ಆದಿತ್ಯ – ಎಲ್‌ 1

ಕಳೆದ ವರ್ಷ ಯಶಸ್ವಿಯಾಗಿ ಚಂದ್ರಯಾನ ಮಾಡಿ ಐತಿಹಾಸಿಕ ಸಾಧನೆ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸದ್ಯ ಆದಿತ್ಯ ಎಲ್‌1 ಬಾಹ್ಯ ನೌಕೆಯನ್ನು ಉಡಾವಣೆ ಮಾಡಿ ಸೂರ್ಯನನ್ನು ಅಧ್ಯಯನ ಮಾಡಲು ಮುಂದಾಗಿತ್ತು.

ಶ್ರೀಹರಿಕೋಟಾದಿಂದ ಉಡಾವಣೆಯಾಗಿದ್ದ ಆದಿತ್ಯ – ಎಲ್‌ 1 ನಾಲ್ಕು ತಿಂಗಳ ಬಳಿಕ ಇಂದು ( ಜನವರಿ 6 ) ಯಶಸ್ವಿಯಾಗಿ ಅಂತಿಮ ಕಕ್ಷೆಯನ್ನು ತಲುಪಿದೆ. ಆದಿತ್ಯ ಎಲ್‌ 1 ಗಮ್ಯಸ್ಥಾನ ತಲುಪುತ್ತಿದ್ದಂತೆಯೇ ಇಸ್ರೋ ಟ್ವೀಟ್‌ ಮಾಡಿದ್ದು “ಭಾರತ, ನಾನು ತಲುಪಿದೆ. ನಾನು ನನ್ನ ಗಮ್ಯಸ್ಥಾನವನ್ನು ತಲುಪಿದೆ” ಎಂದು ಬರೆದುಕೊಂಡಿದೆ. ಆದಿತ್ಯ ಎಲ್‌ 1 ಯಶಸ್ವಿಯಾಗಿ ಎಲ್‌ 1 ಬಿಂದುವಿನ ಹಾಲೋ ಕಕ್ಷೆಯನ್ನು ತಲುಪಿದೆ ಎಂದು ಉಲ್ಲೇಖಿಸಿದೆ.

ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಇನ್ನೂ ವಿವಿಧ ಕ್ಷೇತ್ರಗಳ ಹಲವಾರು ಪ್ರಮುಖರು ಟ್ವೀಟ್‌ ಮಾಡಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದು, ಇಸ್ರೋಗೆ ಶುಭ ಕೋರಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ