Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಚುನಾವಣೆ ಎಫೆಕ್ಟ್‌: ಎರಡು ಐಪಿಎಲ್‌ ಪಂದ್ಯಗಳ ದಿನಾಂಕ ಬದಲಾವಣೆ ಮಾಡಿದ ಬಿಸಿಸಿಐ

ಮುಂಬೈ: ಇತ್ತೀಚೆಗಷ್ಟೇ ಐಪಿಎಲ್‌ 2024ರ ದ್ವಿತೀಯಾರ್ಧದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಸಿಸಿಐ, ಇದೀಗ ಎರಡು ಪಂದ್ಯಗಳ ದಿನಾಂಕಗಳನ್ನು ಬದಲಾವಣೆ ಮಾಡಿದೆ. ಕೋಲ್ಕತ್ತಾ ಮತ್ತು ರಾಜಸ್ತಾನ ನಡುವಿನ ಪಂದ್ಯ ಹಾಗು ಗುಜರಾತ್‌ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಬದಲಾವಣೆ ಮಾಡಲಾಗಿದೆ.

ಏಪ್ರಿಲ್‌ 17 ರಂದು ಕೆಕೆಆರ್-ರಾಜಸ್ಥಾನ್‌ ನಡುವಿನ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಬೇಕಿತ್ತು. ಆದರೆ ಅಂದು ರಾಮನವಮಿ ಇರುವುದರಿಂದ ಹಾಗೂ ಇದೇ ತಿಂಗಳ 19 ರಂದು ಪಶ್ಚಿಮ ಬಂಗಾಳದಲ್ಲಿ ಮೊದಲ ತಿಂಗಳ ಹಂತದ ಚುನಾವಣೆ ನಡೆಯುವುದರಿಂದ ಪಂದ್ಯಕ್ಕೆ ಸೂಕ್ಯ ಭದ್ರತೆ ಒದಗಿಸಲು ಸಾಧ್ಯವಾಗದು ಎಂಬುದಾಗಿ ಪೊಲೀಸ್‌ ಇಲಾಖೆ ಬಂಗಾಳ ಕ್ರಿಕೆಟ್‌ ಮಂಡಳಿಗೆ ಸೂಚಿಸಿದೆ. ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಸ್ನೇಹಶಿಷ್‌ ಗಂಗಲಿ ಇದನ್ನು ಬಿಸಿಸಿಐ ಗಮನಕ್ಕೆ ತಂದು, ಬದಲಾವಣೆ ಮಾಡಲಾಗಿದೆ.

ಇನ್ನೂ ಕೆಕೆಆರ್‌-ಆರ್‌ ಆರ್‌ ಪಂದ್ಯವನ್ನು ಒಂದು ದಿನ ಮುಂಚಿತವಾಗಿ ಅಂದರೆ, ಏ.16 ರಂದು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿಂದೆ ಇದೇ ಪಂದ್ಯವು ಏ.17 ರಂದು ನಡೆಯಲಿದೆ. ಈ ಬಗ್ಗೆ ಬಿಸಿಸಿಐ ಇಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Tags: