ಮುಂದಿನ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸುತ್ತೆ ಎಂಬುದನ್ನು ಪ್ರಕಟಿಸಲು ಇಂದು ( ನವೆಂಬರ್ 26 ) ಸಂಜೆ 4 ಗಂಟೆಯೇ ಡೆಡ್‌ಲೈನ್ ಆಗಿತ್ತು.
ಈ ಸಮಯದ ಗಡುವು ಈಗ ಮುಕ್ತಾಯವಾಗಿದ್ದು, ಯಾವ ತಂಡಗಳು ಯಾವ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ ಹಾಗೂ ಯಾವ ಆಟಗಾರರನ್ನು ರಿಲೀಸ್ ಮಾಡಿವೆ ಎಂಬ ಮಾಹಿತಿ ಹೊರಬಿದ್ದಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ನೀಡಿದೆ ಹಾಗೂ ಯಾವೆಲ್ಲಾ ಆಟಗಾರರಿಗೆ ಕೊಕ್ ಕೊಟ್ಟಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಉಳಿಸಿಕೊಂಡ ಆಟಗಾರರು: ರೋಹಿತ್ ಶರ್ಮಾ ( ನಾಯಕ ), ಡಿವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್ ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಕೆಮರೂನ್ ಗ್ರೀನ್, ಶಾಮ್ಸ್ ಮುಲಾನಿ, ನೆಹಲಾ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಟೇರಿಯಾ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆನ್‌ಡಾರ್ಫ್ ಹಾಗೂ ರೊಮಾರಿಯೊ ಶೆಫರ್ಡ್.
( ರೊಮಾರಿಯೊ ಶೆಫರ್ಡ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ವಿನಿಮಯ ಮಾಡಿಕೊಳ್ಳಲಾಗಿದೆ )
ಬಿಡುಗಡೆಗೊಂಡ ಆಟಗಾರರು: ಮೊಹಮ್ಮದ್ ಅರ್ಷದ್ ಖಾನ್, ರಮಣ್‌ದೀಪ್ ಸಿಂಗ್, ಹೃತಿಕ್ ಶೋಕಿನ್, ರಾಘವ್ ಘೋಯಲ್, ಜೋಫ್ರಾ ಆರ್ಚರ್, ಟ್ರಿಸ್ಟನ್ ಸ್ಟಬ್ಸ್, ಡ್ಯೂನ್ ಯಾನ್ಸೆನ್, ಜೇ ರಿಚರ್ಡ್ಸನ್, ರಿಲೆ ಮೆರೆಡಿತ್, ಕ್ರಿಸ್ ಜೋರ್ಡನ್ ಹಾಗೂ ಸಂದೀಪ್ ವಾರಿಯರ್.