Mysore
25
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲಿದೆ : ಮೊಹಮ್ಮದ್‌ ಶಮಿ !

 ನವದೆಹಲಿ : ಕ್ರಿಕೆಟ್‌ ಮೈದಾನದಲ್ಲಾಗಲಿ ಅಥವಾ ಸಾಮಾಜಿಕ ಮಾಧ್ಯಮವಾಗಲಿ ಮೊಹಮ್ಮದ್ ಶಮಿ ಪಾಕಿಸ್ತಾನವನ್ನು ಎದುರಿಸಲು ಎಂದಿಗೂ ಹಿಂಜರಿಯುವುದಿಲ್ಲ. ಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲಿದೆ ಎಂದು ಹೇಳುವ ಮೂಲಕ ಶಮಿ ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸುದ್ದಿವಾಹಿನಿಯ ಸಂದರ್ಶನದಲ್ಲಿ ನಿರೂಪಕ ಸಬ್ಸೆ ಜ್ಯಾದಾ ತೋ ಆಪ್ ಪಾಕಿಸ್ತಾನ್ ಕೋ ಧೋಟೆ ಹೈನ್ (ನೀವು ಪಾಕಿಸ್ತಾನವನ್ನು ಹೆಚ್ಚು ನಿಂದಿಸುತ್ತೀರಿ) ಎಂದು ಹೇಳಿದಾಗ ಶಮಿ “ವೋ ತೋ ಖೂನ್ ಮೇ ಹೈ (ಇದು ನನ್ನ ರಕ್ತದಲ್ಲಿದೆ) ಎಂದು ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರ ಹಸನ್ ರಾಝಾ, ವಿಶ್ವಕಪ್ ಸಮಯದಲ್ಲಿ ಹೆಚ್ಚಿನ ಸ್ವಿಂಗ್ ಪಡೆಯಲು ಶಮಿ ಮತ್ತು ಇತರ ಭಾರತೀಯ ಬೌಲರ್ಗಳು ಚೆಂಡನ್ನು ತಿರುಚುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಮಿ, ಇತರರ ಯಶಸ್ಸಿನ ಬಗ್ಗೆ ಜನರು ಏಕೆ ಅಸೂಯೆಪಡುತ್ತಾರೆಂದು ನನಗೆ ಎಂದಿಗೂ ಅರ್ಥವಾಗುವುದಿಲ್ಲ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!