Mysore
20
overcast clouds
Light
Dark

ದೇವರಿಗೆ ಅಪವಿತ್ರ ನೀರು ಎರಚಿ ಅಪಮಾನ : ನಂಜನಗೂಡು ದೇವಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿರುವ ನೂರಾರು ಭಕ್ತರು

ನಂಜನಗೂಡು: ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಬದ್ಧ ಅಂಧಕಾಸುರನ ಸಂಹಾರದ ವೇಳೆ ಕೆಲವು ಕಿಡಿಗೇಡಿಗಳು ದೇವರ ಉತ್ಸವ ಮೂರ್ತಿಗೆ ಅಪವಿತ್ರ ನೀರು ಎರಚಿದ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ದೇವಾಲಯದ ಮುಂದೆ ನೂರಾರು ಸಂಖ್ಯೆಯಲ್ಲಿ  ಭಕ್ತರು   ಜಮಾಯಿಸಿ ಧರಣಿ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ನಂಜನಗೂಡಿನಲ್ಲಿ ನಡೆದ ಅಂಧಕಾಸುರನ ಸಂಹಾರದ ವೇಳೆ ಕೆಲವು ಬುದ್ಧಿ ಜೀವಿ ಹೆಸರಿನ ಕಿಡಿಗೇಡಿಗಳು ಶ್ರೀಕಂಠೇಶ್ವರನ ಉತ್ಸವ ಮೂರ್ತಿಗೆ ಅಪವಿತ್ರ ನೀರನ್ನು ಎರಚುವ ಮೂಲಕ ಅಪಮಾನ ಮಾಡಿದ್ದನ್ನು ವಿರೋಧಿಸಿ ಭಕ್ತರು ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಆರೋಪಿಗಳನ್ನು ಬಂಧಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ಪೊಲೀಸರಿಗೆ ದೂರನ್ನು ಸಲ್ಲಿಸಲಾಗಿತ್ತು.

ಆದರೆ ಘಟನೆ ನಡೆದು ೨ದಿನ ಕಳೆದರು ಇನ್ನು ಕಿಡಿಗೇಡಿಗಳನ್ನು ಬಂಧಿಸಿರುವುದನ್ನು ವಿರೋಧಿಸಿ ಇಂದು ನಂಜನಗೂಡು ಶ್ರೀಕಂಠೇಶ್ವರನ ದೇವಾಲಯದ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

 

ಈ ಕೂಡಲೆ ಕಿಡಿಗೇಡಿಗಳನ್ನು ಬಂಧಿಸಿ, ಅಲ್ಲದ್ದೆ  ಪ್ರತಿಭಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಬರುವಂತೆ ಒತ್ತಾಯ ಮಾಡಿದ್ದಾರೆ.

ಪ್ರತಿಭಟನೆಗೆ ಅರ್ಚಕರ ಬೆಂಬಲ: ದೇವರಿಗೆ ಅಪವಿತ್ರ ನೀರು ಎರಚಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಭಕ್ತಮಂಡಳಿಗೆ ಶ್ರೀಕಂಠೇಶ್ವರ ದೇವಾಲಯದ ನೌಕರರು ಬೆಂಬಲ ಸೂಚಿಸಿದ್ದಾರೆ. ಇಂದು ದೇವಾಲಯದ ಮುಂದೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದೇವಾಲಯದ ಆಗಮಿಕರಾದ ನಾಗಚಂದ್ರ ದೀಕ್ಷಿತ್‌, ಪಾರುಪತ್ತೆಗಾರರರಾದ ಶಂಕರ ದೀಕ್ಷಿತ್‌, ನೀಲಕಂಠ ದೀಕ್ಷಿತ್‌ ಸೇರಿದಂತೆ ದೇವಾಲಯದ ಅರ್ಚಕರು ಬೆಂಬಲ ನೀಡಿದ್ದಾರೆ.

ದೇವಾಲಯದ ಯಾವುದೇ ಆಚರಣೆಯಾಗಲಿ, ದೇವಾಲಯದ ಕೈಪಿಡಿಯ ಪ್ರಕಾರವೇ ನಡೆಯುತ್ತದೆ. ಹಾಗೇ ನಡೆದುಕೊಂಡು ಬಂದಿದೆ. ಅಂಧಾಕಾಸುರನ ಸಂಹಾರಕ್ಕೆ ತೆರಳುವ ಸಂದರ್ಭದಲ್ಲಿ ಕಿಡಿಗೇಡಿಗಳು ಉತ್ಸವ ಮೂರ್ತಿ ಹಾಗೂ ಶ್ರೀಪಾದ ಸೇವಾ ನಿರತರಾಗಿದ್ದವರ ಮೇಲೆ ಅಪವಿತ್ರ ನೀರು ಎರಚಿ ಅಪಮಾನ ಮಾಡಿದ್ದಾರೆ. ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ಅವಘಡ ಸಂಭವಿಸಿದೆ. ಇಂದು ನಂಜನಗೂಡು ದೇವಾಲಯದಲ್ಲಿ ನಡೆದೆದ ಘಟನೆ ನಾಳೆ ಬೇರೆ ದೇವಾಲಯಗಳಲ್ಲಿ ನಡೆದರೆ ಆಶ್ಚರ್ಯವೇನು ಇಲ್ಲ. ಹೂಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
– ನಾಗಚಂದ್ರ ದೀಕ್ಷಿತ್‌, ಪ್ರಧಾನ ಅರ್ಚಕರು, ಶ್ರೀ ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ