Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅಕ್ರಮ ಹಣ ವರ್ಗಾವಣೆ: ನಟ ಪ್ರಕಾಶ್‌ ರಾಜ್‌ಗೆ ಇಡಿ ಸಮನ್ಸ್‌

ಚೆನ್ನೈ : ತಿರುಚಿರಾಪಳ್ಳಿ ಮೂಲದ ಜ್ಯೂವೆಲರಿ ಗ್ರೂಪ್‌ ವಿರುದ್ಧ ೧೦೦ ಕೋಟಿ ವಂಚನೆಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗಾಗಿ ಸಮನ್ಸ್‌ ನೀಡಿದೆ.

ತನಿಖೆಯು ತಿರುಚಿರಾಪಳ್ಳಿ ಮಲದ ಪಾಲುದಾರಿಕೆ ಸಂಸ್ಥೆಯಾದ ಪ್ರಣವ್‌ ಜ್ಯೂವೆಲರ್ಸ್‌ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ಸಂಸ್ಥೆಯ ಮೇಲೆ ನವೆಂಬರ್‌ ೨೦ ರಂದು ದಾಳಿ ನಡೆಸಿ ೨೩.೭೦ ಲಕ್ಷ ನಗದು ಹಾಗೂ ಚಿನ್ನಾಭರಣವನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು. ಪ್ರಕಾಶ್‌ ರಾಜ್‌ ಅವರು ಈ ಕಂಪನಿ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ ಹಾಗಾಗಿ ಇವರು ಮುಂದಿನ ವಾರ ವಿಚಾರಣೆಗಾಗಿ ಇಡಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಪ್ರಣವ್‌ ಜ್ಯುವೆಲರ್ಸ್‌ ಮತ್ತು ಇತರರು ಚಿನ್ನದ ಹೂಡಿಕೆ ಯೋಜನೆಯ ನೆಪದಲ್ಲಿ ಸಾರ್ವಜನಿಕರಿಂದ ೧೦೦ ಕೋಟಿ ಗೂ ಹೆಚ್ಚಿನ ಆದಾಯವನ್ನು ಭರವಸೆಯೊಂದಿಗೆ ಸಂಗ್ರಹಿಸಿದ್ದಾರೆ ಎಂದು ಫೆಡರಲ್‌ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ. ತಮಿಳುನಾಡು ಆರ್ಥಿಕ ಅಪರಾಧ ವಿಭಾಗದ ಎಫ್‌ಐಆರ್‌ ನಿಂದ ಇಡಿ ಪ್ರಕರಣವನ್ನು ದಾಖಲಿಸಿದೆ.

ಕನ್ನಡ, ತಮಿಳು, ಹಿಂದಿ ಭಾಷೆ ಸೇರಿದಂತೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ವಿಶಿಷ್ಟ ಪಾತ್ರಗಳ ಮೂಲಕ ಹೆಸರಾಗಿರುವ ನಟ ಪ್ರಕಾಶ್‌ ರಾಜ್‌, ಬಿಜೆಪಿಯನ್ನು ನಿರಂತರವಾಗಿ ಟೀಕಿಸುತ್ತಾ ಬರುತ್ತಿದ್ದಾರೆ. ಈಗ ಇವರ ಮೇಲೆ ಇಡಿ ದಾಳಿ ಬಗ್ಗೆ ಪರ-ವಿರೋಧ ಚರ್ಚೆಗಳು ಹೆಚ್ಚಾಗಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ