ಲಕ್ನೋ : ಬಿಜೆಪಿಯವರು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕಿದರೆ ಜನರು ಪ್ರತಿ ದೇವಾಲಯದಲ್ಲಿ ಬೌದ್ಧ ಮಠವನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳು, ಪುರಿಯ ಜಗನ್ನಾಥ ದೇವಾಲಯ, ಕೇರಳದ ಅಯ್ಯಪ್ಪ ದೇವಾಲಯ ಮತ್ತು ಪಂಢರಪುರ (ಮಹಾರಾಷ್ಟ್ರ) ವಿಠ್ಠಲ ದೇವಾಲಯಗಳು ಬೌದ್ಧ ವಿಹಾರಗಳಾಗಿವೆ. ಈ ಬೌದ್ಧ ವಿಹಾರಗಳನ್ನು ಕೆಡವಲಾಯಿತು ಮತ್ತು ನಂತರ ಹಿಂದೂ ಧಾರ್ಮಿಕ ದೇವಾಲಯಗಳು ಅಲ್ಲಿಗೆ ಬಂದವು ಎಂದಿದ್ದಾರೆ. ಎಂಟನೇ ಶತಮಾನದವರೆಗೂ ಅವುಗಳು ಬೌದ್ಧ ವಿಹಾರಗಳಾಗಿದ್ದವು’ಎಂದು ಅವರು ಹೇಳಿದ್ದಾರೆ.
ಈ ಎಲ್ಲಾ ದೇವಾಲಯಗಳು ಬೌದ್ಧ ಮಠಗಳಾಗಿದ್ದವು ಎಂಬುದಕ್ಕೆ ಸಾಕಷ್ಟು ಐತಿಹಾಸಿಕ ಪುರಾವೆಗಳಿವೆ ಎಂದು ಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ. ಈ ದೇವಾಲಯಗಳನ್ನು ಬೌದ್ಧ ಮಠಗಳಾಗಿ ಪರಿವರ್ತಿಸುವುದು ಅವರ ಉದ್ದೇಶವಲ್ಲ ಎಂದು ಅವರು ಹೇಳಿದರು.
ಆದರೆ, ನೀವು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕಿದರೆ, ಪ್ರತಿ ದೇವಾಲಯದಲ್ಲಿ ಬೌದ್ಧ ಮಠವನ್ನು ಏಕೆ ಹುಡುಕಬಾರದು? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರು ಮಸೀದಿ-ಮಂದಿರದ ವಿಚಾರ ಎತ್ತುವ ಮೂಲಕ ಷಡ್ಯಂತ್ರ ಹೂಡುತ್ತಿದ್ದಾರೆ. ಅವರು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕುತ್ತಿದ್ದಾರೆ. ಇದಕ್ಕೆ ಅವರು ದುಬಾರಿ ಬೆಲೆ ತೆರಬೇಕಾಗುತ್ತದೆ ’ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ದೇವಾಲಯಗಳನ್ನು ಮತ್ತೆ ಬೌದ್ಧ ವಿಹಾರಗಳಾಗಿ ಪರಿವರ್ತಿಸುವುದು ನಮ್ಮ ಉದ್ದೇಶವಲ್ಲ. ಆದರೆ, ನೀವು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕಿದರೆ, ಪ್ರತಿ ದೇವಾಲಯದಲ್ಲಿ ಬೌದ್ಧ ವಿಹಾರವನ್ನು ಏಕೆ ಹುಡುಕಬಾರದು? ಎಂದು ಅವರು ಪ್ರಶ್ನಿಸಿದ್ದಾರೆ.
ಮೌರ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ, ‘ಸನಾತನ ಧರ್ಮವನ್ನು ಮತ್ತೆ ಮತ್ತೆ ಅವಮಾನಿಸುವುದು ಸಮಾಜವಾದಿ ಪಕ್ಷ ಮತ್ತು ಅದರ ನಾಯಕರ ಅಭ್ಯಾಸವಾಗಿದೆ’ಎಂದು ಕಿಡಿ ಕಾರಿದ್ದಾರೆ.