Mysore
24
scattered clouds

Social Media

ಬುಧವಾರ, 15 ಜನವರಿ 2025
Light
Dark

ಅಪಾಯದ ಹಂತ ತಲುಪಿದ ಬಿಸಿಗಾಳಿ

ನವದೆಹಲಿ : ತಾಪಮಾನ ಬದಲಾವಣೆಯಿಂದ ಭಾರತದಲ್ಲಿ ಬಿಸಿ ಗಾಳಿ ತೀವ್ರವಾಗುತ್ತಿದ್ದು, ದೇಶದಾದ್ಯಂತ ಶೇ 90ರಷ್ಟು ಜನರು ‘ಅತ್ಯಂತ ಅಪಾಯ‘ ಅಥವಾ ‘ಎಚ್ಚರಿಕೆ‘ ವಲಯದಲ್ಲಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೇಂಬ್ರಿಡ್ಜ್ ಯೂನಿವರ್ಸಿಟಿಯ ರಮಿತ್ ದೇವನಾಥ್ ಹಾಗೂ ಅವರ ಸಹೋದ್ಯೋಗಿಗಳು ಸೇರಿ ಈ ಅಧ್ಯಯನ ನಡೆಸಿದ್ದಾರೆ.ಮುಖ್ಯವಾಗಿ, ದೇಶದಲ್ಲೇ ಬಿಸಿಗಾಳಿಯ ತೀವ್ರ ಬಾಧೆಗೆ ಒಳಪಟ್ಟ ಪ್ರದೇಶ ದೆಹಲಿ ಎನಿಸಿಕೊಂಡಿದೆ. ಇದರ ನಿಯಂತ್ರಣಕ್ಕಾಗಿ ಇಲ್ಲಿನ ಸರ್ಕಾರ ಪರಿಣಾಮಕಾರಿಯಾದ ಪರಿಹಾರ ಯೋಜನೆ ರೂಪಿಸಿಲ್ಲ ಎಂದು ಅಧ್ಯಯನ ಬಹಿರಂಗಪಡಿಸಿದೆ.

ಅಲ್ಲದೇ, ಕಳೆದ 50 ವರ್ಷಗಳಲ್ಲಿ ಬಿಸಿ ಗಾಳಿಯಿಂದ 17,000ಕ್ಕೂ ಹೆಚ್ಚಿನ ಜನರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಭೂವಿಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಎಂ.ರಾಜೀವನ್ ನೇತೃತ್ವ ತಂಡ ಪ್ರಕಟಿಸಿದ ಸಂಶೋಧನಾ ವರದಿ ಉಲ್ಲೇಖಿಸಿದೆ.

ಈ ವರದಿಯಲ್ಲಿ, 1971ರಿಂದ 2021ರ ವರೆಗೆ ದೇಶದ ವಿವಿಧೆಡೆ 706 ಬಾರಿ ಬಿಸಿಗಾಳಿ ಬೀಸಿದ ಘಟನೆಗಳು ಕಂಡುಬಂದಿವೆ ಎಂಬ ಸಾಲುಗಳಿವೆ.

ವಿಶ್ವಸಂಸ್ಥೆ ತಿಳಿಸಿದ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸುವುದರಲ್ಲಿ ಭಾರತಕ್ಕೆ ‘ಬಿಸಿ ಗಾಳಿ ಬಾಧೆ‘ ಅಡ್ಡಿಪಡಿಸಿದೆ. ಸರ್ಕಾರಗಳು ದೇಶದ ವಾಯುಗುಣವನ್ನು ಪುನರ್‌ ಪರಿಶೀಲನೆಗೆ ಒಳಪಡಿಸಿ ಈಗಿಂದಲೇ ಎಚ್ಚೆತ್ತುಕೊಳ್ಳಬೇಕೆಂದು ಅಧ್ಯಯನವು ಎಚ್ಚರಿಕೆ ನೀಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ