Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಅಮೇರಿಕಾದಲ್ಲಿ ಹಿಂದು ದೇವಾಲಯ ವಿರೂಪ: ಸಚಿವ ಜೈಶಂಕರ್‌ ಬೇಸರ

ನವದೆಹಲಿ:  ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಹಿಂದು ದೇವಾಲಯವನ್ನು ವಿರೂಪಗೊಳಿಸಿರುವ ಪ್ರಕರಣ ಕುರಿತು ‘ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳಿಗೆ ವಿದೇಶಗಳಲ್ಲಿ ಇಷ್ಟು ಸ್ವಾತಂತ್ರ್ಯ ದೊರಕಬಾರದು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದು ದೇವಾಲಯವನ್ನು ವಿರೂಪಗೊಳಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ದೇಗುಲ ಧ್ವಂಸ ಪ್ರಕರಣದ ಕುರಿತ ಸುದ್ದಿ ನೋಡಿದೆ. ಇಂಥ ಘಟನೆ ನಡೆದಿರುವುದು ವಿಷಾದಕರ. ಕ್ಯಾಲಿಫೋರ್ನಿಯಾದ ನೀವಾರ್ಕ್‌ನಲ್ಲಿಯ ಪ್ರಮುಖ ಹಿಂದೂ ದೇವಾಲಯ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಈ ಕೃತ್ಯ ನಡೆದಿದೆ.

ಅದರ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಕೆತ್ತಲಾಗಿದೆ.ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದು ದ್ವೇಷಾಪರಾದ ಪ್ರಕರಣ ಇರಬಹುದೆಂದು ವಾರ್ಕ್‌ ನಗರ ಪೊಲೀಸರು ಶಂಕಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ