Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸಿಐಸಿ ಮುಖ್ಯಸ್ಥರಾಗಿ ನೇಮಕಗೊಂಡ ದೇಶದ ಮೊದಲ ದಲಿತ ಅಧಿಕಾರಿ

ನವದೆಹಲಿ : ಹಿರಿಯ ಅಧಿಕಾರಿ ಹೀರಾಲಾಲ್ ಸಮರಿಯಾ ಅವರು ಇಂದು ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಮುಖ್ಯಸ್ಥರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಅವರು ಕೇಂದ್ರ ಮಾಹಿತಿ ಆಯೋಗದ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ ವ್ಯಕ್ತಿಯಾಗಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಿನ್ಹಾ ಅವರ ಅವಧಿ ಮುಗಿದ ನಂತರ ಪಾರದರ್ಶಕತೆಯ ಸಮಿತಿಯ ಉನ್ನತ ಹುದ್ದೆ ಖಾಲಿಯಾಗಿ ಉಳಿದಿತ್ತು. ಸಮರಿಯಾ ಅವರು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸಾರ್ವಜನಿಕ ಸೇವೆಯಲ್ಲಿ ವಿಶಿಷ್ಟವಾದ ವೃತ್ತಿಜೀವನವನ್ನು ಹೊಂದಿದ್ದಾರೆ. ಆಯೋಗವು ಮುಖ್ಯ ಮಾಹಿತಿ ಆಯುಕ್ತರ ನೇತೃತ್ವದಲ್ಲಿದೆ ಮತ್ತು 10 ಮಾಹಿತಿ ಆಯುಕ್ತರನ್ನು ಹೊಂದಬಹುದಾಗಿದೆ.

2005ರ ಮಾಹಿತಿ ಹಕ್ಕು ಕಾಯಿದೆ ಇಲ್ಲದಿದ್ದರೆ ನಿಷ್ಪರಿಣಾಮಕಾರಿಯಾಗಲಿದೆ ಎಂದು ಎಚ್ಚರಿಸಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಅಕ್ಟೋಬರ್ 30ರಂದು ನೀಡಿದ ನಿರ್ದೇಶನದ ನಂತರ ಈ ನೇಮಕಾತಿ ನಡೆದಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ಎಲ್ಲಾ ರಾಜ್ಯಗಳಿಂದ ರಾಜ್ಯ ಮಾಹಿತಿ ಆಯೋಗಗಳಲ್ಲಿ ಅಧಿಕೃತ ಮಾಹಿತಿ ಆಯುಕ್ತರ ಸಂಖ್ಯೆ (ಎಸ್‍ಐಸಿ), ಪ್ರಸ್ತುತ ಖಾಲಿ ಹುದ್ದೆಗಳು ಮತ್ತು ಬಾಕಿ ಇರುವ ಒಟ್ಟು ಸಂಖ್ಯೆಯ ಮಾಹಿತಿಯನ್ನು ಸಂಗ್ರಹಿಸಲು ನಿರ್ದೇಶಿಸಿದೆ. 2005ರ ಮಾಹಿತಿ ಹಕ್ಕು ಕಾಯಿದೆಯು ಡೆಡ್ ಲೆಟರ್ ಆಗಲಿದೆ ಎಂದು ಸಿಜೆಐ ಎಚ್ಚರಿಸಿದ್ದಾರೆ.

ಡಿಸೆಂಬರ್ 2019 ರಲ್ಲಿ, ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗವನ್ನು ತಡೆಯಲು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಉಲ್ಲೇಖಿಸಿ, ಸಿಐಸಿ ಮತ್ತು ಎಸ್‍ಐಸಿಗಳಲ್ಲಿನ ಎಲ್ಲಾ ಮಾಹಿತಿ ಆಯುಕ್ತರ ಖಾಲಿ ಹುದ್ದೆಗಳನ್ನು ಮೂರು ತಿಂಗಳೊಳಗೆ ಭರ್ತಿ ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ