Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ರಾಜ್ಯದ 31 ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿ ನೇಮಿಸಿ ಸರ್ಕಾರ ಆದೇಶ: ಯಾವ ಜಿಲ್ಲೆಗೆ ಯಾರು?

ಬೆಂಗಳೂರು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು.

government-appointed-district-in-charge-secretaries

ಮುಂದುವರೆದು, ಪಟ್ಟಿಯ ಅನುಸಾರ ಜಿಲ್ಲಾವಾರು ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ ಈ ಕೆಳಕಂಡಂತೆ ಇದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ

ಅಧಿಕಾರಿಯ ಹೆಸರು – ಉಸ್ತುವಾರಿ ಜಿಲ್ಲೆ

1. ಟಿ.ಕೆ. ಅನಿಲ್ ಕುಮಾರ್ – ಬೆಂಗಳೂರು ನಗರ
2. ಸಲ್ಮಾ ಕೆ. ಫಾಹಿಂ – ಬೆಂಗಳೂರು ಗ್ರಾಮಾಂತರ
3. ವಿ. ರಶ್ಮಿ ಮಹೇಶ್ – ರಾಮನಗರ
4. ಅಮಲಾನ್ ಆದಿತ್ಯ ಬಿಸ್ವಾಸ್ – ಚಿತ್ರದುರ್ಗ
5. ಡಾ. ಏಕ್ ರೂಪ್ ಕೌರ್​ – ಕೋಲಾರ6. ಅಂಜುಂ ಪರ್ವೇಜ್ – ಬೆಳಗಾವಿ
7. ಡಾ. ಎನ್. ಮಂಜುಳ – ಚಿಕ್ಕಬಳ್ಳಾಪುರ
8. ಎಸ್. ಆರ್. ಉಮಾಶಂಕರ್ – ಶಿವಮೊಗ್ಗ
9. ಗುಂಜನ್ ಕೃಷ್ಣ- ದಾವಣಗೆರೆ
10. ಡಾ.ಎಸ್. ಸೆಲ್ವ ಕುಮಾ‌ರ್​ – ಮೈಸೂರು
11. ಡಾ.ಪಿ.ಸಿ. ಜಾಫರ್- ಮಂಡ್ಯ
12. ಮಂಜುನಾಥ ಪ್ರಸಾದ್ .ಎನ್ – ಚಾಮರಾಜನಗರ
13. ಡಾ.ಎಂ.ಎನ್. ಅಜಯ್ ನಾಗಭೂಷಣ್ – ಹಾಸನ
14. ಡಾ.ಎನ್.ವಿ. ಪುಸಾದ್ – ಕೊಡಗು
15. ರಾಜೇಂದರ್‌ ಕುಮಾರ್ ಕಠಾರಿಯಾ – ಚಿಕ್ಕಮಗಳೂರು
16. ಡಾ. ಎಂ.ಟಿ. ರೇಜು – ಉಡುಪಿ
17. ಎಲ್​​.ಕೆ ಅತೀಕ್​ – ದಕ್ಷಿಣ ಕನ್ನಡ
18. ಜಿ.ಸತ್ಯವತಿ – ತುಮಕೂರು
19. ವಿ.ಅನ್ಬುಕುಮಾರ್​ – ಧಾರವಾಡ
20. ಸಿ. ಶಿಖಾ – ಗದಗ
21. ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ – ವಿಜಯಪುರ
22. ರಿತೇಶ್​ ಕುಮಾರ್ ಸಿಂಗ್​ – ಉತ್ತರ ಕನ್ನಡ
23. ಮೊಹಮ್ಮದ್ ಮೊಹಿಸಿನ್ – ಬಾಗಲಕೋಟೆ
24. ಪಂಕಜ್ ಕುಮಾರ್ ಪಾಂಡೆ – ಕಲಬುರಗಿ
25. ಮನೋಜ್ ಜೈನ್ – ಯಾದಗಿರಿ
26. ಡಾ. ಜೆ.ರವಿಶಂಕರ್ – ರಾಯಚೂರು
27. ನವೀನ್ ರಾಜ್ ಸಿಂಗ್ – ಕೊಪ್ಪಳ
28. ಡಾ. ಕೆ.ವಿ. ಲೋಕ್ ಚಂದ್ರ – ಬಳ್ಳಾರಿ
29. ಮುನೀಶ್ ಮೌದ್ಗಿಲ್ – ಬೀದರ್​
30. ಡಾ.ವಿಶಾಲ್.ಆರ್ – ಹಾವೇರಿ
31. ಕೆ.ಪಿ.ಮೋಹನ್​ರಾಜ್ ​- ವಿಜಯನಗರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ