Mysore
26
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಬಿಜೆಪಿಯಿಂದ ಯುಸಿಸಿ ಎಂಬ ಗೂಗ್ಲಿ: ಸಚಿನ್ ಪೈಲಟ್

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದ್ದು, ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಏಕರೂಪ ನಾಗರಿಕ ಸಂಹಿತೆಯ ವಿಷಯವನ್ನು ಎತ್ತಿದೆ ಎಂದು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಸಿಟ್ಟಿಗೆದ್ದಿರುವ ಸಚಿನ್ ಪೈಲಟ್, ಗೆಹ್ಲೋಟ್ ಜೊತೆ ಕಾಂಗ್ರೆಸ್ ಹೈಕಮಾಂಡ್ ರಾಜಿ ಮಾಡಿದ ನಂತರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಯಾವುದೇ ಕಾಂಕ್ರೀಟ್ ಪ್ರಸ್ತಾಪವಿಲ್ಲದೆ ಯುಸಿಸಿ ಬಗ್ಗೆ ಮಾತನಾಡುವುದು ತುಂಬಾ ವ್ಯಂಗ್ಯವಾಡಿದರು.

ಹಣದುಬ್ಬರ, ಬಡತನ ಮತ್ತು ಇತರ ಗಂಭೀರ ವಿಷಯಗಳನ್ನು ಸಾರ್ವಜನಿಕರಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಉದ್ದೇಶಪೂರ್ವಕವಾಗಿ ಯುಸಿಸಿಯ ಗೂಗ್ಲಿಯನ್ನು ಸಾರ್ವಜನಿಕರ ಮುಂದೆ ಎಸೆದಿದೆ. ಆದರೆ ಇದು ಯಾವುದೇ ವಿಶೇಷ ಪರಿಣಾಮ ಬೀರುವುದಿಲ್ಲ, ಸಾರ್ವಜನಿಕರು ತಮ್ಮ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಸಚಿನ್ ಪೈಲಟ್, ಯುಸಿಸಿಗೆ ಸಂಬಂಧಿಸಿದಂತೆ ಸರ್ಕಾರವು ಇನ್ನೂ ಯಾವುದೇ ಪ್ರಸ್ತಾವನೆ ಅಥವಾ ನೀಲನಕ್ಷೆಯನ್ನು ಹೊರತಂದಿಲ್ಲ, ಆದರೆ ಅದು ಖಂಡಿತವಾಗಿಯೂ ಅದನ್ನು ರಾಜಕೀಯ ಸಾಧನವಾಗಿ ಬಳಸುತ್ತಿದೆ ಎಂದು ಆರೋಪಿಸಿದರು. ಯುಸಿಸಿ ಮತ್ತು ಕಾಂಗ್ರೆಸ್‌ನ ನಿಲುವಿನ ಕುರಿತು ಚರ್ಚೆಯ ಬಗ್ಗೆ ಕೇಳಿದಾಗ, ಪೈಲಟ್, ‘ಏಕರೂಪ ನಾಗರಿಕ ಸಂಹಿತೆ, ಯಾವುದೇ ಮಸೂದೆ ಬಂದಿದೆಯೇ, ಯಾವುದೇ ಪ್ರಸ್ತಾವನೆ ಬಂದಿದೆಯೇ, ಯಾವುದೇ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆಯೇ, ನನಗೆ ಗೊತ್ತಿಲ್ಲ’ ಎಂದು ಪೈಲಟ್ ಹೇಳಿದರು. ಯುಸಿಸಿ ಹೆಸರಿನಲ್ಲಿ ವಿವಿಧ ಜನರು, ವಿವಿಧ ಪಕ್ಷಗಳು, ವಿವಿಧ ಧಾರ್ಮಿಕ ಮುಖಂಡರು ತಮ್ಮ ಅಭಿಪ್ರಾಯವನ್ನು ನೀಡುತ್ತಿದ್ದಾರೆ ಎಂದರು.

ಯಾವುದೇ ಕಾಂಕ್ರೀಟ್ ಪ್ರಸ್ತಾಪವಿಲ್ಲದೆ ಯುಸಿಸಿಯಲ್ಲಿ ಮಾತನಾಡುವುದು ಗಾಳಿಯಲ್ಲಿ ಬಾಣ ಬಿಟ್ಟಂತೆ ಎಂದು ಸಚಿನ್ ಪೈಲಟ್ ಹೇಳಿದರು. ಈ ವೇಳೆ ಅವರು ಯುಸಿಸಿ ಬಗ್ಗೆ ಲೇವಡಿ ಮಾಡಿದ ಅವರು, ಸರ್ಕಾರವು ಯುಸಿಸಿಯಂತ ಗೂಗ್ಲಿ ಹಾಕಿದೆ. ಅದರ ಬಗ್ಗೆ ಚರ್ಚೆ, ವಾದ ನಡಿಬೇಕು ಎಂಬುದೇ ಅವರ ಉದ್ದೇಶ. ಯುಸಿಸಿ ಪ್ರಸ್ತಾಪದ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ