Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

 ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಮ್ಮ ಉದ್ದೇಶ : ಮುಖ್ಯ ಚುನಾವಣ ಆಯುಕ್ತ ರಾಜೀವ

ನವದೆಹಲಿ : ದೇಶದಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸುವುದೇ ನಮ್ಮ ಉದ್ದೇಶವಾಗಿದೆ ಎಂದು ಚುನಾವಣ ಆಯುಕ್ತ ರಾಜೀವ್‌ ತಿಳಿಸಿದರು.

ಲೋಕಸಭಾ ಚುನಾವಣ ದಿನಾಂಕ ಘೋಷಣೆ ಮಾಡಲು   ಚುನಾವಣಾ ಆಯೋಗ ವತಿಯಿಂದ ದೆಹಲಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿದ್ದ  ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಭಾರತದಾದ್ಯಂತ ೯೭ ಕೋಟಿ ಮತದಾರರಿದ್ದಾರೆ. ಅದರಲ್ಲಿ ಪುರುಷ ಮತದಾರರು ೪೯ ಕೋಟಿ ೭೨ ಲಕ್ಷ, ಮಹಿಳಾ ಮತದಾರರು ೪೭ ಕೋಟಿ ೧೫ ಲಕ್ಷ , ನೂರು ವರ್ಷಕ್ಕೂ ಮೇಲ್ಪಟ್ಟವರು ೨ಲಕ್ಷ ೧೮ ಸಾವಿರ, ಮೊದಲ ಬಾರಿ ಮತದಾರರು ೧ ಕೋಟಿ ೮೨ಲಕ್ಷ , ೮೦ ವರ್ಷದ ಮೇಲ್ಪಟ್ಟ ಮತದಾರರು-೧ ಕೋಟಿ ೯೮ಲಕ್ಷ . ೮೮ಲಕ್ಷ ವಿಶೇಷಚೇತನ, ೪೮ಸಾವಿರ ತೃತಿಯಲಿಂಗಿ  ಮತದಾರಿದ್ದಾರೆ ಎಂದು ತಿಳಿಸಿದರು.

ಸುಲಭ ಹಾಗೂ ಯಾವುದೇ ಸಮಸ್ಯೆ ಎದುರಾಗದಂತೆ ದೇಶಾದ್ಯಂತ ೧೦.೫ ಲಕ್ಷ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ೫೫ ಲಕ್ಷ ಇವಿಎಂ ಮಿಷನ್‌ ವ್ಯವಸ್ಥೆ ಮಾಡಲಾಗುತ್ತಿದೆ.

ಒಟ್ಟಾರೆ ೧.೫ ಕೋಟಿ ಭದ್ರತಾ ಅಧಿಕಾರಗಿಳ ನಿಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅದಲ್ಲದೇ ೮೦ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನದ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಚುನಾವಣಾ ಅಧಿಕಾರಿಗಳಾದ ಗ್ಯಾನೇಶ್‌ ಕುಮಾರ್‌, ರಾಜೀವ್‌ ಕುಮಾರ್‌, ಡಾ ಎಸ್‌ ಎಸ್‌ ಸಂದು ಉಪಸ್ಥಿತರಿದ್ದರು.

Tags: