ಮಂಡ್ಯ: ಜನಿವಾರ ಹಾಕದವರೆಲ್ಲಾ ಶುದ್ರರೇ. ಹಾಗಾದರೆ ಬ್ರಾಹ್ಮಣ ಮಹಿಳೆಯರು ಜನಿವಾರ ಹಾಕುವುದಿಲ್ಲ ಹೀಗಾಗಿ ಅವರೂ ಶೂದ್ರರೇ ಎಂದು ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಹೇಳಿದ್ದಾರೆ.
ನಗರದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾ ಜಾರಿಗಾಗಿ ಜನಾಗ್ರಹ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಚಾತುರ್ವಣಗಳಲ್ಲಿ ಇಂದು ಕೇವಲ ಬ್ರಾಹ್ಮಣ ಹಾಗೂ ಶೂದ್ರ ಎರಡು ಮಾತ್ರ ಉಳಿದಿದೆ. ಯಾರೆಲ್ಲಾ ಜನಿವಾರ ಹಾಕುವುದಿಲ್ಲವೋ ಅವರೆಲ್ಲಾ ಶೂದ್ರರೇ. ಹಾಗಾದರೆ ಬ್ರಾಹ್ಮಣ ಮಹಿಳೆಯರು ಜನಿವಾರ ಹಾಕುವುದಿಲ್ಲ ಹೀಗಾಗಿ ಅವರು ಶೂದ್ರರೇ ಎಂದು ವ್ಯೆಂಗ್ಯವಾಡಿದ್ದಾರೆ.
ಇನ್ನು ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ. ಅದರಂತೇ ದಲಿತ ಸಂಘರ್ಷ ಸಮಿತಿ ಯುವಜನರನ್ನು ತಯಾರು ಮಾಡಿ, ಸಮಾಜಕ್ಕೆ ಸತ್ಯತಿಳಿಸುವ ಕೆಲಸ ಮಾಡಬೇಕಿದೆ.
ವೈದಿಕ ಧರ್ಮವನ್ನು ಸಿಗಿದು ಹಾಕಿದ್ದರು ಕುವೆಂಪು:
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ರಾಷ್ಟ್ರ ಕವಿ ಕುವೆಂಪು ಹಿಂದೂ ಹಾಗೂ ವೈದಿಕ ಧರ್ಮವನ್ನು ಸಿಗಿದು ತೋರಣ ಕಟ್ಟಿದ್ದಾರೆ. ಕುವೆಂಪು ಕೇವಲ ರಸ ಋಷಿ ಮಾತ್ರವಲ್ಲ ಅವರೊಬ್ಬ ಕ್ರಾಂತಿಕಾರಿ ಲೇಖಕ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.





