ಶಿವಮೊಗ್ಗ : ಅಪ್ಪ ಮಗನ ಕಪಿಮುಷ್ಠಿಯಲ್ಲಿ ಸಿಲುಕಿರುವ ಬಿಜೆಪಿ ಪಕ್ಷ ವಿಲವಿಲ ಒದ್ದಾಡುತ್ತಿದೆ ಎಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ ಕಾಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷದಲ್ಲಿ ಯಾವುದೇ ನಿರ್ಧಾರವಾಗಬೇಕಾದರೂ ಅಪ್ಪ ಮಕ್ಕಳೆ ತೀರ್ಮಾನಮಾಡಬೇಕು. ಇದರಿಂದ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು ವಿಲವಿಲ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಬಗ್ಗೆ ಪಕ್ಷದ ಅನೇಕ ನಿಷ್ಠಾವಂತ ಕಾರ್ಯಕರ್ತರು ಅಸಮಧಾನ ಹೊರಹಾಕುತ್ತಿದ್ದಾರೆ. ಕೇಂದ್ರದ ವರಿಷ್ಠರು ಕೇವಲ ಯಡಿಯೂರಪ್ಪ ಒಬ್ಬರಿಂದಲೇ ಪಕ್ಷ ಸುಭದ್ರವಾಗಿರಲು ಸಾಧ್ಯ ಎಂದು ನಂಬಿ ಕೂತಿದ್ದಾರೆ. ರಾಜ್ಯದ ಲಿಂಗಾಯಿತರು ಯಡಿಯೂರಪ್ಪ ಅವರು ಹೇಳಿದಹಾಗೆ ಕೇಳುತ್ತಾರೆ ಎಂದು ನಂಬಿದ್ದಾರೆ ಅವರಿಗೆ ಮನವರಿಕೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಹಿಂದುತ್ವವಾಧಿಗಳನ್ನು ತುಳಿಯುತ್ತಿದ್ದಾರೆ : ಪಕ್ಷದಲ್ಲಿ ಹಿಂದುತ್ವವಾಧಿಗಳನ್ನು ತುಳಿಯುವ ಕೆಲಸವಾಗುತ್ತಿದೆ. ಅದನ್ನು ಸ್ವತಃ ಯಡಿಯೂರಪ್ಪನವರೇ ಮಾಡುತ್ತಿದ್ದಾರೆ.
ನನ್ನನ್ನೂ ಸೇರಿದಂತೆ ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್ ಅಂತಹ ಪಕ್ಕ ಹಿಂದುತ್ವ ವಾಧಿಗಳನ್ನು ತುಳಿಯುತ್ತಿದ್ದಾರೆ ಎಂದು ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿದರು.
ಅಪ್ಪ ಮಕ್ಕಳಿಂದ ಪಕ್ಷವನ್ನು ಉಳಿಸಬೇಕು : ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಇಬ್ಬರೂ ಸೇರಿ ತಾಯಿಯಂತಃ ಬಿಜೆಪಿ ಪಕ್ಷವನ್ನು ಕತ್ತು ಹಿಸುಕಿ ಕೊಲ್ಲುವ ಕೆಲಸ ಮಾಡುತ್ತಿದ್ದಾರೆ.
ಅವರಿಂದ ಪಕ್ಷವನ್ನು ಮುಕ್ತ ಮಾಡಬೇಕು. ಹೀಗಾಗಿ ಹೀಗಾಗಿ ಪಕ್ಷದ ಅನೇಕ ನೊಂದ ಕಾರ್ಯಕರ್ತರ ಪರವಾಗಿ ನಾನು ಸ್ವತಂತ್ರ್ಯವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.