ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಆಯೋಗವು ಚುನಾವಣೆಯ ದಿನಾಂಕವನ್ನು ಯಾವಾಗ ಘೋಷಿಸಲಿದೆ ಎಂಬ ಕುತೂಹಲ ರಾಜಕೀಯ ಪ್ರಿಯರಲ್ಲಿ ಇರುವಾಗಲೇ ಕೇಂದ್ರ ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಘೋಷಿಸಿದೆ.
15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 15 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಎಂದು ಘೋಷಿಸಲಾಗಿದೆ. ಫೆಬ್ರವರಿ 27ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ತಿಳಿಸಲಾಗಿದೆ.
ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ದೇಶದ ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಯಾವ ರಾಜ್ಯದ ಎಷ್ಟು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ..
ಕರ್ನಾಟಕ – 4 ಸ್ಥಾನ
ಆಂಧ್ರಪ್ರದೇಶ – 3 ಸ್ಥಾನ
ಬಿಹಾರ – 6 ಸ್ಥಾನ
ಛತ್ತೀಸ್‌ಗಢ – 1 ಸ್ಥಾನ
ಗುಜರಾತ್ – 4 ಸ್ಥಾನ
ಹರಿಯಾಣ – 1 ಸ್ಥಾನ
ಹಿಮಾಚಲ ಪ್ರದೇಶ – 1 ಸ್ಥಾನ
ಮಧ್ಯಪ್ರದೇಶ – 5 ಸ್ಥಾನ
ಮಹಾರಾಷ್ಟ್ರ – 6 ಸ್ಥಾನ
ತೆಲಂಗಾಣ -3 ಸ್ಥಾನ
ಉತ್ತರ ಪ್ರದೇಶ – 10 ಸ್ಥಾನ
ಉತ್ತರಾಖಂಡ – 1 ಸ್ಥಾನ
ಪಶ್ಚಿಮ ಬಂಗಾಳ – 5 ಸ್ಥಾನ
ಒಡಿಶಾ – 3 ಸ್ಥಾನ
ರಾಜಸ್ಥಾನ -3 ಸ್ಥಾನ
ಒಟ್ಟು 56