ನವದೆಹಲಿ : ಉತ್ತರಾಖಂಡ್‌ನ ಪಿಥೋರಗಢದಲ್ಲಿ ಇಂದು ಸಂಜೆ 6.34ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 3.2ರಷ್ಟು ಕಂಪನದ ತೀವ್ರತೆ ದಾಖಲು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಸಂಜೆ 6:34 ರ ಸುಮಾರಿಗೆ ಭೂಕಂಪನದ ಅನುಭವ ಆಗಿದೆ. ತಕ್ಷಣ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನದ ಆಳವು ನೆಲದಿಂದ 5 ಕಿಲೋಮೀಟರ್ ಒಳಗೆ ಸಂಭವಿಸಿದೆ ಎನ್ನಲಾಗಿದೆ.
An earthquake of magnitude 3.2 on the Richter Scale hit Pithoragarh, Uttarakhand today at around 6:34 pm: National Centre for Seismology pic.twitter.com/DAihG8IHLl
— ANI (@ANI) July 23, 2023
ಇದಕ್ಕೂ ಮುನ್ನ ಮೇ 11ರಂದು ಬೆಳಿಗ್ಗೆ ಉತ್ತರಾಖಂಡದ ಪಿಥೋರಗಢದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮೇ 8 ರಂದು ಬಾಗೇಶ್ವರ ಜಿಲ್ಲೆಯಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದೇ ರೀತಿಯಾಗಿ ಮೇ 5 ಮತ್ತು 7 ರಂದು ಸಹ ಭೂಕಂಪವಿಸಿತ್ತು.





