Mysore
32
scattered clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಸಾಯೋಕೆ ನನ್ನ ಕಾರೇ ಬೇಕಿತ್ತಾ : ಬೈಕ್‌ ಸವಾರನಿಗೆ ಭವಾನಿ ರೇವಣ್ಣ ಅವಾಜ್

ಮೈಸೂರು : ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರ ಸೊಸೆ ಭವಾನಿ ರೇವಣ್ಣ ಅವರ ಕಾರು ಅಪಘಾತವಾಗಿದ್ದು, ಕಾರಿಗೆ ಡಿಕ್ಕಿ ಹೊಡೆದ ಬೈಕ್‌ ಸವಾರನನ್ನು ಭವಾನಿ ರೇವಣ್ಣ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ನೆನ್ನೆ ಕೆಆರ್‌ ನಗರದ ಸಾಲಿಗ್ರಾಮದಿಂದ ಹೊಳೆ ನರಸಿಪುರದ ಕಡೆಗೆ ಹೊರಟಿದ್ದ ವೇಳೆ ರಾಮಪುರ ಗೇಟ್‌ ಬಳಿ ಭವಾನಿ ರೇವಣ್ಣ ಅವರ ಕಾರಿಗೆ ಎದುರಿನಿಂದ ಬಂದ ಬೈಕ್‌ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗ ಸ್ವಲ್ಪ ಸ್ಕ್ಯಾಚ್‌ ಆಗಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಬೈಕ್‌ ಸವಾರನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಯುವ ಹಾಗಿದ್ದರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನೀನು ಸಾಯೋಕೆ ನನ್ನ ಕಾರೇ ಬೇಕಿತ್ತಾ ? ಡ್ಯಾಮೆಜ್‌ ಮಾಡೋಕೆ ನೀನ್ಯಾವೊನು. ಅವನು ಸತ್ರೆ ಸಾಯಲಿ. ನನ್ನ ಗಾಡಿ ಯಾರು ರಿಪೇರಿ ಮಾಡಿಸಿಕೊಡ್ತಾರೆ. ಈಗ ರಿಪೇರಿ ಮಾಡಿಸೋಕೆ ಐವತ್ತು ಲಕ್ಷ ಬೇಕು. ಒಂದುವರೆ ಕೋಟಿ ರೂಪಯಿಯ ಕಾರು ನನ್ನದು, ಅವನ ಗಾಡಿ ಸುಟ್ಟುಹಾಕಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದವರು ಅಕ್ಕ ಗಾಡಿ ತೆಗೀರಿ ಹೋಗೋಣ ಎಂದಿದ್ದಾರೆ. ಇದಕ್ಕೆ ಭವಾನಿ ರೇವಣ್ಣ ಅವರು ಗಾಡಿ ತಗೊಂಡು ಏನ್‌ ಮಾಡೋಣ ರೀಪೇರಿ ಮಾಡೋಕೆ ಐವತ್ತು ಲಕ್ಷ ಬೇಕು ಕೊಡ್ತೀಯಾ ನೀನು ? ದುಡ್ಡು ಕೊಡುವ ಹಾಗಿದ್ದರೆ ನ್ಯಾನ ಮಾಡೋಕೆ ಬನ್ನಿ ಎಂದು ಸಂಯಮ ಮೀರಿ ಮಾತನಾಡಿದ್ದಾರೆ.

ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗುತ್ತಿದ್ದು, ಭವಾನಿ ರೇವಣ್ಣ ಅವರ ಆಕ್ರೋಶದ ನುಡಿಗಳನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಆ ಬಡಜೀವಕ್ಕಿಂತ ಇವರ ಕಾರೇ ಹೆಚ್ಚಾಯ್ತಾ ಸಾರ್ವಜನಿಕ ಜೀವನದಲ್ಲಿರುವ ಇರುವ ಇವರ ಈ ರೀತಿಯ ಮಾತುಗಳು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!