Mysore
16
clear sky

Social Media

ಗುರುವಾರ, 29 ಜನವರಿ 2026
Light
Dark

ಡಿಕೆ ಶಿವಕುಮಾರ್ ಭಾರತದ ಅತಿ ಶ್ರೀಮಂತ ಶಾಸಕ: ಭಾರತದ ಬಿಲಿಯನೇರ್ ಶಾಸಕರಿವರು

ಬೆಂಗಳೂರು : ಎಡಿಆರ್ ಮತ್ತು ಎನ್​ಇಡಬ್ಲ್ಯೂ ಬಿಡುಗಡೆ ಮಾಡಿದ ಜನಪ್ರತಿನಿಧಿಗಳ ಮಾಹಿತಿ ವರದಿಯೊಂದರಲ್ಲಿ ದೇಶದ ಶಾಸಕರ ಆಸ್ತಿ-ಪಾಸ್ತಿ, ಸಾಲ ಇತ್ಯಾದಿ ವಿವರ ಬಹಿರಂಗವಾಗಿದೆ. ಈ ವರದಿ ಪ್ರಕಾರ ಸಚಿವ ಡಿ.ಕೆ.ಶಿವಕುಮಾರ್‌ ಅವರು ಭಾರತದ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ.

ಕುತೂಹಲವೆಂದರೆ ಶ್ರೀಮಂತ ಶಾಸಕರು ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 100 ಕೋಟಿ ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಬಿಲಿಯನೇರ್ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರು 32 ಮಂದಿ ಇದ್ದಾರೆ. ದೇಶದ ಯಾವ ರಾಜ್ಯದಲ್ಲೂ ಇಷ್ಟೊಂದು ಬಿಲಿಯನೇರ್ ಶಾಸಕರು ಇಲ್ಲ. ದೇಶದ ಮೊದಲ ಮೂರು ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ. ಹಾಗೆಯೇ, ಅಗ್ರ 20 ಸಿರಿವಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರೇ 12 ಮಂದಿ ಇದ್ದಾರೆ.

ಇದೊಂದು ಅಪೂರ್ವ ಮತ್ತು ಮುಜುಗರದ ದಾಖಲೆ ಎನಿಸಿದೆ. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್​ನಲ್ಲಿ ಘೋಷಿಸಲಾಗಿರುವ ಅಂಶಗಳನ್ನು ಆಧರಿಸಿ ಎಡಿಆರ್ ಮತ್ತು ಎನ್​ಇಡಬ್ಲ್ಯೂ ಈ ಪಟ್ಟಿ ಪ್ರಕಟಿಸಿದೆ.

ಸಾವಿರ ಕೋಟಿ ರೂಗೂ ಹೆಚ್ಚು ಆಸ್ತಿ ಇರುವ ಮೂವರು ಕನ್ನಡಿಗ ಶಾಸಕರು: ದೇಶದ ಅತಿಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಕರ್ನಾಟಕದವರದ್ದೇ. ಡಿಕೆ ಶಿವಕುಮಾರ್, ಕೆಎಚ್ ಪುಟ್ಟಸ್ವಾಮಿ ಗೌಡ ಮತ್ತು ಪ್ರಿಯಾಕೃಷ್ಣ ಅವರು ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಈ ಬಾರಿ ಅಚ್ಚರಿ ಮೂಡಿಸಿದ್ದು ಪುಟ್ಟಸ್ವಾಮಿಗೌಡರದ್ದು. ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಪುಟ್ಟಸ್ವಾಮಿಗೌಡ ಅವರು ತಮ್ಮ ಬಳಿ 1,267 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ 1,413 ಕೋಟಿ ರೂ ಘೋಷಿತ ಆದಾಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಅವರ ಘೋಷಿತ ಆಸ್ತಿ 1,156 ಕೋಟಿ ರೂ ಇದೆ.

ದೇಶದ ಟಾಪ್20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರು ಮತ್ತವರ ಘೋಷಿತ ಆಸ್ತಿಮೌಲ್ಯ:

  • ಡಿಕೆ ಶಿವಕುಮಾರ್, ಕಾಂಗ್ರೆಸ್: 1,413ಕೋಟಿ ರೂ
  • ಕೆಎಚ್ ಪುಟ್ಟಸ್ವಾಮಿಗೌಡ, ಪಕ್ಷೇತರ: 1,267 ಕೋಟಿ ರೂ
  • ಪ್ರಿಯಾಕೃಷ್ಣ, ಕಾಂಗ್ರೆಸ್: 1,156 ಕೋಟಿ ರೂ
  • ಬಿಎಸ್ ಸುರೇಶ, ಕಾಂಗ್ರೆಸ್: 648 ಕೋಟಿ ರೂ
  • ಎನ್.ಎ. ಹ್ಯಾರಿಸ್, ಕಾಂಗ್ರೆಸ್: 439 ಕೋಟಿ ರೂ
  • ಎಚ್.ಕೆ. ಸುರೇಶ್, ಬಿಜೆಪಿ: 435 ಕೋಟಿ ರೂ
  • ಆರ್.ವಿ. ದೇಶಪಾಂಡೆ, ಕಾಂಗ್ರೆಸ್: 363 ಕೋಟಿ ರೂ
  • ಎಂಆರ್ ಮಂಜುನಾಥ್, ಜೆಡಿಎಸ್: 316 ಕೋಟಿ ರೂ
  • ಎಸ್.ಎನ್. ಸುಬ್ಬಾರೆಡ್ಡಿ, ಕಾಂಗ್ರೆಸ್: 313 ಕೋಟಿ ರೂ
  • ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್: 312 ಕೋಟಿ ರೂ
  • ಎಂ ಕೃಷ್ಣಪ್ಪ, ಕಾಂಗ್ರೆಸ್: 296 ಕೋಟಿ ರೂ
  • ಮುನಿರತ್ನ, ಬಿಜೆಪಿ: 293 ಕೋಟಿ ರೂ
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!