Mysore
18
broken clouds

Social Media

ಭಾನುವಾರ, 12 ಜನವರಿ 2025
Light
Dark

ಮುಸ್ಲಿಮರು ಎಂದಾದರೂ ಬಿಜೆಪಿಗೆ ಮತ ಹಾಕಿದ್ದಾರೆಯೇ? : ಬೆಲ್ಲದ್ ಪ್ರಶ್ನೆ‌

ಹುಬ್ಬಳ್ಳಿ : ಮುಸ್ಲಿಮರ ಮೀಸಲಾತಿ ತೆಗೆದುಹಾಕಿದ್ದರಿಂದ ಅವರೆಲ್ಲರೂ ಒಟ್ಟಾಗಿ ಕಾಂಗ್ರೆಸ್‌ಗೆ ಮತ ಹಾಕಿದರು. ಹೀಗಾಗಿ, ಬಿಜೆಪಿ ಸೋತಿತು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಮುಸ್ಲಿಮರು ಯಾವತ್ತಾದರೂ ಬಿಜೆಪಿಗೆ ಮತ ಹಾಕಿದ್ದಾರೆಯೇ? ಎಂದು ಶಾಸಕ ಅರವಿಂದ್ ಬೆಲ್ಲದ್ ಪ್ರಶ್ನಿಸಿದರು.

ಇಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಮರು ಯಾವತ್ತಿದ್ದರೂ ನಮಗೆ ಮತ ಹಾಕುವುದೇ ಇಲ್ಲ. ಮುಸ್ಲಿಂನ ಕೆಲವು ಒಳಪಂಗಡಗಳು ಪ್ರವರ್ಗ-1, 2ಎ, 2ಬಿ ಅಡಿ ಮೀಸಲಾತಿ ಪಡೆಯುತ್ತಿದ್ದವು. ಒಟ್ಟಾರೆಯಾಗಿ ಅತಿ ಹೆಚ್ಚು ಮೀಸಲಾತಿಯನ್ನು ಮುಸ್ಲಿಮರು ಧರ್ಮದವರು ಪಡೆಯುತ್ತಿದ್ದರು. ನಮ್ಮ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಅದಕ್ಕಾಗಿ ಅದನ್ನು ತೆಗೆದುಹಾಕಲಾಯಿತು. ಆದರೆ, ಇದನ್ನು ತೆಗೆದಿದ್ದಕ್ಕೆ ನಾವು ಸೋತಿದ್ದೇವೆ ಎಂಬ ವಿಶ್ಲೇಷಣೆ ಸರಿಯಲ್ಲ ಎಂದರು.

ಒಳಮೀಸಲಾತಿ ವರ್ಗೀಕರಣ ಹಾಗೂ ಒಕ್ಕಲಿಗ, ವೀರಶೈವ ಲಿಂಗಾಯತದವರಿಗೆ ಮೀಸಲಾತಿ ನೀಡುವ ತೀರ್ಮಾನ 6 ತಿಂಗಳು ಮೊದಲು ಮಾಡಬೇಕಾಗಿತ್ತು. ಅದರ ಪ್ರಯೋಜನಗಳ ಬಗ್ಗೆ ಜನರಿಗೆ ತಲುಪಿಸಲು ಸಮಯಾವಕಾಶ ದೊರೆಯುತ್ತಿತ್ತು. ಕೊನೆ ಗಳಿಗೆಯಲ್ಲಿ ಮೀಸಲಾತಿ ತೀರ್ಮಾನ ಆಗಿದ್ದರಿಂದ ಜನರಿಗೆ ತಿಳಿಸಲು ಸಾಧ್ಯವಾಗಲಿಲ್ಲ ಎಂದು ಬೆಲ್ಲದ್ ವಿಶ್ಲೇಷಿಸಿದರು.

ಪರಿಶಿಷ್ಟಪಂಗಡ (ಎಸ್‌ಟಿ) ಸಮುದಾಯಕ್ಕೆ ಇದ್ದ ಶೇ. 3ರ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸುವಂತಹ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಯಿತು. ಆದರೆ, ಇದರಿಂದ ಪಕ್ಷಕ್ಕೇನೂ ಲಾಭವಾಗಲಿಲ್ಲ. ಈ ಜನಾಂಗದವರಿಗೆ ಮೀಸಲಾಗಿದ್ದ 16 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೂ ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿಲ್ಲ. ಇದರ ಬಗ್ಗೆ ಚರ್ಚಿಸಬೇಕಾಗಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ