Mysore
20
overcast clouds
Light
Dark

ಅಂಧಕಾಸುರ ಸಂಹಾರ: ನಂಜನಗೂಡಿನಲ್ಲಿ ಭಕ್ತರು ಹಾಗೂ ಪ್ರಗತಿಪರ ಹೋರಾಟಗಾರರ ನಡುವೆ ವಾಗ್ವಾದ

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಂಧಕಾಸುರ ಸಂಹಾರವನ್ನು ಆಯೋಜಿಸಲಾಗಿತ್ತು. ದೇವಾಲಯದ ಬಳಿ ಇರುವ ರಾಕ್ಷಸ ಮಂಟಪದ ಮುಂದೆ ಅಂಧಕಾಸುರನ ಚಿತ್ರವನ್ನು ರಂಗೋಲಿ ಮೂಲಕ ಬಿಡಿಸಿ ದೇವರ ಮೂರ್ತಿಯನ್ನು ಆ ಮಂಟಪದ ಬಳಿ ತಂದ ಬಳಿಕ ಆ ರಂಗೋಲಿಯನ್ನು ಕಾಲಿನಿಂದ ಅಳಿಸಿ ಹಾಕುವ ಮೂಲಕ ಅಂಧಕಾಸುರನ ಸಂಹಾರವನ್ನು ಆಚರಿಸಲಾಗುತ್ತಿತ್ತು.

ಆದರೆ ಇಂದು ( ಡಿಸೆಂಬರ್‌ 26 ) ನಡೆಯಬೇಕಿದ್ದ ಈ ಆಚರಣೆಗೆ ಪ್ರಗತಿಪರ ಚಿಂತಕರು ವಿರೋಧ ವ್ಯಕ್ತಪಡಿಸಿದ್ದು ಇಂತಹ ಆಚರಣೆ ನಡೆಯಬಾರದು ಎಂದು ತಡೆಯಲು ಮುಂದಾಗಿದ್ದಾರೆ. ಈ ವೇಳೆ ನಂಜುಂಡೇಶ್ವರ ಭಕ್ತರು ಹಾಗೂ ಪ್ರಗತಿಪರರ ಚಿಂತಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಆಚರಣೆ ಶತಮಾನಗಳಿಂದ ನಡೆದುಕೊಂಡು ಬಂದಿದ್ದು ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸುವುದಿಲ್ಲ ಎಂದು ಪ್ರಗತಿಪರ ಚಿಂತಕರ ವಿರುದ್ಧ ಕಿಡಿಕಾರಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ