Mysore
25
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಪ್ರತಿಯೊಬ್ಬರೂ ಘನತೆ, ಸಭ್ಯತೆ ಕಾಪಾಡಿಕೊಂಡರೆ ಮಾತ್ರ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ: ಎಚ್‌ಡಿ ದೇವೇಗೌಡ

ಬೆಂಗಳೂರು: ಸಂಸತ್ತಿನ ಕಲಾಪಗಳಲ್ಲಿನ ಅಡೆತಡೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಪ್ರತಿಯೊಬ್ಬರೂ ಘನತೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯ ಎಂದು ಹೇಳಿದರು.

ಕರ್ನಾಟಕದ ರಾಜ್ಯಸಭಾ ಸದಸ್ಯರೂ ಆಗಿರುವ 90 ವರ್ಷದ ಜೆಡಿಎಸ್ ವರಿಷ್ಠರು, ಇತ್ತೀಚಿನ ದಿನಗಳಲ್ಲಿ ಸಂಸತ್ತಿನ ಕಲಾಪವನ್ನು ಹಾಳು ಮಾಡುತ್ತಿರುವ ಗದ್ದಲ ಎಬ್ಬಿಸುವುದು, ಹೆಸರು ಕರೆಯುವುದು ಮತ್ತು ಘೋಷಣೆ ಕೂಗುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಅನಾರೋಗ್ಯದ ಹೊರತಾಗಿಯೂ ನಾನು ಸಂಸತ್ತಿಗೆ ಹಾಜರಾಗಲು ಬಂದಿದ್ದೇನೆ. ಆದರೆ, ಏನು ನಡೆಯುತ್ತಿದೆಯೋ ಅದರ ಬಗ್ಗೆ ತುಂಬಾ ನಿರಾಶೆಗೊಂಡಿದ್ದೇನೆ. ನನ್ನ ಸುದೀರ್ಘ ಅನುಭವದಿಂದ ಹೇಳುವುದಾದರೆ, ಇದೊಂದು ಹೊಸ ನಿರಾಶಾದಾಯಕ ಪ್ರವೃತ್ತಿ ಎಂದು ನಾನು ಹೇಳುತ್ತೇನೆ. ಪ್ರತಿಯೊಬ್ಬರೂ ಘನತೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡರೆ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಬಹುದು’ ಎಂದು ಅವರು ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿದ್ದಾರೆ.

‘ಕೂಗಾಡುವುದು, ಹೆಸರು ಕರೆಯುವುದು, ಘೋಷಣೆ ಕೂಗುವುದು ನಮ್ಮ ವ್ಯವಸ್ಥೆಯಲ್ಲಿ ಹಿಂದಿನಿಂದ ಉಳಿದಿರುವ ಪದ್ಧತಿಯನ್ನು ಮಾತ್ರ ನಾಶಪಡಿಸುತ್ತದೆ’ ಎಂದು ಅವರು ಹೇಳಿದರು.

ಪ್ರತಿಪಕ್ಷ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಮಣಿಪುರ ಕುರಿತು ನಿಯಮ 167ರ ಅಡಿಯಲ್ಲಿ ಚರ್ಚೆಗೆ ಮತ್ತು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಗೆ ಒತ್ತಾಯಿಸಿದ ನಂತರ ರಾಜ್ಯಸಭೆಯ ಕಲಾಪವನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಆಡಳಿತ ಪಕ್ಷದ ಸದಸ್ಯರು ಖರ್ಗೆ ಅವರ ಬೇಡಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಖರ್ಗೆ, ‘ಪ್ರಧಾನಿ ಸದನಕ್ಕೆ ಬಂದರೆ ಏನಾಗುತ್ತದೆ? ಅವರು ‘ಪರಮಾತ್ಮ’ನಲ್ಲ, ಅವರು ದೇವರಲ್ಲ ಎಂದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರ ಘೋಷಣೆಗಳು ತೀವ್ರಗೊಂಡವು. ಗದ್ದಲದ ನಡುವೆ ಸಭಾಪತಿ ಜಗದೀಪ್ ಧನಕರ್ ಅವರು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!