Mysore
20
scattered clouds

Social Media

ಬುಧವಾರ, 11 ಮಾರ್ಚ್ 2026
Light
Dark

ಮೃತ ವ್ಯಕ್ತಿಯಿಂದ ಸಾಲ ವಸೂಲಿಗೆ ಮುಂದಾದ ಎಸ್ ಬಿ ಐ ಅನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಕೋರ್ಟ್

ನವದೆಹಲಿ : ಯಾವುದೇ ಬ್ಯಾಂಕ್ ಗ್ರಾಹಕನಿಗೆ ಸಾಲ ಮರುಪಾವತಿ ಮಾಡುವಂತೆ ಮೊಕದ್ದಮೆ ದಾಖಲಿಸುವ ಮುನ್ನ ಅವರು ಬದುಕಿದ್ದಾರೋ ಅಥವಾ ಮೃತಪಟ್ಟಿದ್ದಾರೋ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ದೆಹಲಿಯ ನ್ಯಾಯಾಲಯವೊಂದು ಹೇಳಿದೆ.

ಸಾವನ್ನಪ್ಪಿದ್ದ ವ್ಯಕ್ತಿಯ ವಿರುದ್ಧ ಎಸ್ ಬಿ ಐ ಬ್ಯಾಂಕ್ ಸಾಲ ವಸೂಲಾತಿಗಾಗಿ ಸಲ್ಲಿಸಿದ್ದ ಅಜ್ಜಿಯನ್ನು ನ್ಯಾಯಾಲಯ ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

ಸಿಯಾ ನಂದ್ ಎಂಬ ವ್ಯಕ್ತಿಯಿಂದ ಸಾಲ ಮತ್ತು ಬಡ್ಡಿ ಸೇರಿ 13.51 ಲಕ್ಷ ಹಣ ಬರಬೇಕು ಎಂದು ಎಸ್ ಬಿ ಐ ಬ್ಯಾಂಕ್ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, ಸಿಯಾನಂದ್ ಅವರಿಂದ ಮಾಹಿತಿ ಪಡೆದು ಬರುವಂತೆ ಸೂಚಿಸಿದ್ದರು. ಈ ವೇಳೆ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಎರಡು ವರ್ಷ ಮೊದಲೇ ಸಿಯಾ ನಂದ್ ಮೃತಪಟ್ಟಿದ್ದಾರೆ ಎಂಬ ವಿಷಯ ತಿಳಿದು ಬಂದಿತ್ತು.

ನಂತರ ಬ್ಯಾಂಕ್ ನ ಶಾಖ ವ್ಯವಸ್ಥಾಪಕರಿಗೆ ನ್ಯಾಯಾಲಯ ತಪ್ಪು ಪ್ರಮಾಣ ಪತ್ರ ನೀಡಿದ್ದಕ್ಕಾಗಿ ನೋಟಿಸ್ ನೀಡಿತ್ತು. ಬ್ಯಾಂಕಿನ ಕಾನೂನು, ಸಾಲ ವಸೂಲಾತಿ ಕೋರ್ಟ್ ಪ್ರಕರಣಗಳ ವಿಭಾಗದ ಪ್ರಧಾನ ವ್ಯವಸ್ಥಾಪಕರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ ಮೃತಪಟ್ಟ ವ್ಯಕ್ತಿಯ ವಿರುದ್ಧ ಸಲ್ಲಿಸಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಕ್ಕೆ ಕಾರಣ ಹೇಳುವಂತೆ ಕೇಳಿತ್ತು.

ಇದೀಗ ನ್ಯಾಯಾಲಯದ ಮುಂದೆ ಎಸ್ ಬಿ ಐ ತಪ್ಪೊಪ್ಪಿಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!