ನಂಜನಗೂಡು : ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಇಂದಿನಿಂದ ಅಧಿಕೃತವಾಗಿ ಚುನಾವಣಾ ಪ್ರಚಾರವನ್ನ ಆರಂಭಿಸಿದ್ದಾರೆ.ಇಂದಿನಿಂದ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿರುವ ದರ್ಶನ್ ಅವರು ಪ್ರಚಾರವನ್ನ ಆರಂಭಿಸುವ ಮುನ್ನ ಚಾಮರಾಜನಗರದಲ್ಲಿನ ಅವರ ಸ್ವಗ್ರಾಮ ಹೆಗ್ಗವಾಡಿಗೆ ಭೇಟಿ ನೀಡಿ ತಂದೆ ಧ್ರುವನಾರಾಯಣ್ ಅವರ
ಸಮಾಧಿಗೆ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದರು.
ನಂತರ ಗ್ರಾಮ ದೇವತೆ ಬೆಳ್ಳಿ ಕಾಣಮ್ಮನ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.ಇಂದಿನಿಂದ ಕ್ಷೇತ್ರ ಸಂಚಾರ ಶುರು ಮಾಡಿರುವ ದರ್ಶನ್ ಅವರು ನಂಜನಗೂಡಿನ ಬೆಲದಕುಪ್ಪೆ,ಬಂಕಹಳ್ಳಿ,ವೆಂಕಟಾಚಲಪುರ,ಯಡಿಯಾಲ,ಪಾರ್ವತಿ ಪುರ,ಹಾಡ್ಯ,ಕಂದೆಗಾಲ,ಅಂಜನಾಪುರ,ಮಡಿಕೆಹುಂಡಿ,ಕಡಜಟ್ಟಿ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.