Mysore
19
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮುರುಘಾ ಶ್ರೀ ಬಿಡುಗಡೆಗೊಳಿಸುವಂತೆ ಕೋರ್ಟ್ ಆದೇಶ

ಚಿತ್ರದುರ್ಗ : ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಸೆರೆವಾಸ ಅನುಭವಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನೆನ್ನೆ ( ಬುಧವಾರ) ಆದೇಶ ಹೊರಡಿಸಿದೆ.

ಇನ್ನು ಎರಡನೇ ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಶರಣರ ವಿರುದ್ಧ ಹೋರಡಿಸಲಾಗಿರುವ ಬಾಡಿ ವಾರಂಟನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತನೆ ಮಾಡಬೇಕು ಎನ್ನುವ ಸರ್ಕಾರಿ ವಕೀಲರ ಅರ್ಜಿಯನ್ನು ಇಂದು ( ಗುರುವಾರ) ವಿಚಾರಣೆ ನಡೆಸುವಂತೆ ಆದೇಶಿಸಿದೆ.

ಮುರುಘಾ ಮಠದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿವಮೂರ್ತಿ ಶರಣರನ್ನು ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಇದರಲ್ಲಿ ಮೊದಲನೇ ಪ್ರಕರಣದಲ್ಲಿ ಬಿಡುಗಡೆಗೆ ಕೆಲ ದಿನಗಳ ಹಿಂದೆ ನ್ಯಾಯಾಲಯ ಆದೇಶ ಹೊರಡಿಸಿತ್ತು.

 ನ್ಯಾಯಾಲಯ ಬಿಡುಗಡೆಗೆ ನೀಡಿರುವ ಆದೇಶ ಪ್ರತಿ ಖಾರಾಗೃಹ ಸೇರುತ್ತಿದ್ದಂತೆ ಶಿವಮೂರ್ತಿ ಶರಣರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!