Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ ಸಿಎನ್​​ ಮಂಜುನಾಥ್​ ಮುಂದುವರಿಕೆ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಜಯದೇವ ನಿರ್ದೇಶಕರಾಗಿ ಡಾ.ಸಿ.ಎನ್.ಮಂಜುನಾಥ್ ಅವರು ಇನ್ನೂ 6 ತಿಂಗಳು ಸೇವಾವಧಿ ಮುಂದುವರೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜುಲೈ 19ಕ್ಕೆ ಡಾ.ಸಿ.ಎನ್​.ಮಂಜುನಾಥ್ ಸೇವಾವಧಿ ಮುಕ್ತಾಯ ಆಗಬೇಕಿತ್ತು. ಆದರೆ ಕಲಬುರಗಿ ಜಯದೇವ ಆಸ್ಪತ್ರೆಯ ಕೆಲಸ ಜವಾಬ್ದಾರಿ ಹಿನ್ನಲೆ ಜನವರಿ ತಿಂಗಳವರೆಗೆ ನಿರ್ದೇಶಕರಾಗಿ ಮುಂದುವರಿಯುವಂತೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 2007 ರಿಂದ ಡಾ.ಮಂಜುನಾಥ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷವೇ ಡಾ.ಮಂಜುನಾಥ್ ಅಧಿಕಾರಾವಧಿ ಮುಕ್ತಾಯವಾಗಿತ್ತು. ಆದರೆ ರೋಗಿಗಳು ಮತ್ತು ಸಿಬ್ಬಂದಿ ಒತ್ತಾಯದ ಮೇರೆಗೆ 1 ವರ್ಷ ಮುಂದುವರಿಸಲಾಗಿತ್ತು. ಸದ್ಯ ಅದರಂತೆಯೇ ಇನ್ನೂ 6 ತಿಂಗಳು ನಿರ್ದೇಶಕರಾಗಿ ಮುಂದುವರೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಜಯದೇವ ಸಂಸ್ಥೆಯ ಆಡಳಿತ ಮಂಡಳಿ ಜತೆ ಸಿಎಂ ಸಿದ್ಧರಾಮಯ್ಯ ಇಂದು ಮಹತ್ವದ ಸಭೆ ನಡೆಸಿದ್ದರು. ಜಯದೇವ ಆಸ್ಪತ್ರೆಯ ಅಭಿವೃದ್ಧಿ ಹಾಗೂ ನಿರ್ವಹಣೆ ಬಗ್ಗೆ ಮತ್ತು ಜಯದೇವ ಆಸ್ಪತ್ರೆ ನಿರ್ದೇಶಕರ ಆಯ್ಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಜುಲೈ 19ರಂದು ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್ ಅವಧಿ ಪೂರ್ಣಗೊಳ್ಳುವ ಹಿನ್ನೆಲೆ ಅವರ ಸೇವಾವಧಿ ಮುಂದುವರಿಸಬೇಕಾ? ಅಥವಾ ಹೊಸ ನಿರ್ದೇಶಕರ ಆಯ್ಕೆ ಮಾಡಬೇಕಾ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ