ಕೋಲಾರ : ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಆಲಿಯಾಸ್ ಕೌನ್ಸಲರ್ ಶ್ರೀನಿವಾಸ್ ಹತ್ಯೆಗೀಡಾದ ಘಟನೆ ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ನಡೆದಿದೆ.
ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಬಾರ್ ಕಾಮಗಾರಿ ವೀಕ್ಷಣೆ ಹೋಗಿದ್ದ ವೇಳೆ ಆರು ಜನ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ಎದೆ, ತಲೆ ಸಹಿತ ದೇಹದ ಹಲವೆಡೆ ಗಂಭೀರ ಗಾಯಗಳಾಗಿದ್ದು, ಕೋಲಾರದ ಜಾಲಪ್ಪಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಗೃಹಸಚಿವ ಪರಮೇಶ್ವರ್ ಹಾಗೂ ರಮೇಶ್ ಕುಮಾರ್ ಅವರ ಆಪ್ತರಾಗಿದ್ದಾರೆ ಎನ್ನಲಾಗುತ್ತಿದೆ. ಬಾರ್ ಕಾಮಗಾರಿ ವೀಕ್ಷಣೆ ಮುಗಿಸಿ ವಾಪಸ್ ತೋಟದ ಮನೆಗೆ ಬಂದಿದ್ದೆವು. ಎರಡು ಬೈಕ್ ನಲ್ಲಿ ಆರು ಜನ ತೋಟದ ಮನೆಗೆ ಬಂದಿದ್ದರು. ಬಂದ ತಕ್ಷಣ ಅಂಕಲ್ ಚೆನ್ನಾಗಿದ್ದೀರ ಎಂದು ಮಾತನಾಡಿಸಿದ್ರು. ಶೇಕ್ ಹ್ಯಾಂಡ್ ಕೊಡುವ ನೆಪದಲ್ಲಿ ಏಕಾಏಕಿ ತಲವಾರಿನಿಂದ ದಾಳಿ ಮಾಡಿದ್ದಾರೆ.