ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸುತ್ತೆ ಎಂಬುದನ್ನು ಪ್ರಕಟಿಸಲು ಇಂದು ( ನವೆಂಬರ್ 26 ) ಸಂಜೆ 4 ಗಂಟೆಯೇ ಡೆಡ್‌ಲೈನ್ ಆಗಿತ್ತು.
ಈ ಸಮಯದ ಗಡುವು ಈಗ ಮುಕ್ತಾಯವಾಗಿದ್ದು, ಯಾವ ತಂಡಗಳು ಯಾವ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ ಹಾಗೂ ಯಾವ ಆಟಗಾರರನ್ನು ರಿಲೀಸ್ ಮಾಡಿವೆ ಎಂಬ ಮಾಹಿತಿ ಹೊರಬಿದ್ದಿದೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ನೀಡಿದೆ ಹಾಗೂ ಯಾವೆಲ್ಲಾ ಆಟಗಾರರಿಗೆ ಕೊಕ್ ಕೊಟ್ಟಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಉಳಿಸಿಕೊಂಡ ಆಟಗಾರರು : ಸಂಜು ಸ್ಯಾಮ್ಸನ್ ( ನಾಯಕ ), ಶಿಮ್ರಾನ್ ಹೆಟ್ಮಾಯರ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಡೊನೊವೆನ್ ಫೆರೈರಾ, ಕುನಾಲ್ ರಾಥೋರ್, ರವಿಚಂದ್ರನ್ ಅಶ್ವಿನ್, ಕುಲ್‌ದೀಪ್ ಸೇನ್, ನವ್‌ದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ಆಡಂ ಜಂಪಾ ಹಾಗೂ ಆವೇಶ್ ಖಾನ್. ( ಅವೇಶ್ ಖಾನ್ ಲಕ್ನೋ ಸೂಪರ್‌ಜೈಂಟ್ಸ್ ತಂಡದಿಂದ ವಿನಿಮಯಗೊಂಡಿದ್ದಾರೆ.)
ಬಿಡುಗಡೆಗೊಂಡ ಆಟಗಾರರು: ಜೋ ರೂಟ್, ಅಬ್ದುಲ್ ಬಸಿತ್, ಜೇಸನ್ ಹೋಲ್ಡರ್, ಆಕಾಶ್ ವಸಿಷ್ಠ್, ಕುಲ್‌ದೀಪ್ ಯಾದವ್, ಒಬೆಡ್ ಮೆಕ್‌ಗಾಯ್, ಮುರುಗನ್ ಅಶ್ವಿನ್, ಕೆಸಿ ಕಾರಿಯಪ್ಪ ಹಾಗೂ ಕೆಎಂ ಆಸಿಫ್.
ಜೋ ರೂಟ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ಹರಾಜಿನಲ್ಲಿ ಭಾಗವಹಿಸದೇ ಉಳಿಯಲಿದ್ದಾರೆ.