ಬಿಲಾಸ್‌ಪುರ್ : ಚಲಿಸುತ್ತಿದ್ದ ಸರಕು ಸಾಗಣೆ ರೈಲೊಂದು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿದ್ದರಿಂದ ಗೂಡ್ಸ್ ರೈಲಿನ ಲೋಕೊ ಪೈಲಟ್ ಮೃತಪಟ್ಟಿದ್ದು, ಇತರ ಐವರು ಸಿಬ್ಬಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಲಾಸ್‌ಪುರ್–ಕಟ್ನಿ ರೈಲ್ವೆ ಮಾರ್ಗದಲ್ಲಿ ಸಿಗ್ನಲ್ ಸಮಸ್ಯೆ ಉಂಟಾಗಿ ಈ ದುರಂತ ಸಂಭವಿಸಿದೆ. ಘಟನೆಯಿಂದಾಗಿ ಸುಮಾರು 10 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಗ್ನೇಯ ಕೇಂದ್ರ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.