Mysore
15
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಶೆಟ್ಟರ್ ಕ್ಷೇತ್ರದಲ್ಲಿ ಸಿಎಂ ಜಾಗರೂಕ ಹೆಜ್ಜೆ : ನಮ್ಮ ಹಿರಿಯರು ಎಂದು ಸಂಬೋಧಿಸಿದ ಬೊಮ್ಮಾಯಿ

ಹುಬ್ಬಳ್ಳಿ : ನಮ್ಮ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಹೊಲಸು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಷ್ಟು ಕೆಟ್ಟು ಹೋಗಿದೆ. ಇವರು ಅಲ್ಲಿ ಹೋಗಿ ಹೊಲಸು ತೆಗೆಯುತ್ತೇನೆ ಎಂದರೆ, ಇವರ ಕೈ ಹೊಲಸಾಗುತ್ತದೆ. ಅದು ಶುದ್ಧವಾಗುವುದಿಲ್ಲ. ಅವರು ಕಾಂಗ್ರೆಸ್ ಸೇರಿದ್ದು ದುರ್ದೈವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸ್ಪರ್ಧಿಸಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ, ಸಿಎಂ ಅನುಸರಿಸಿರುವ ಜಾಣ್ಮೆಯ ನಡೆ. ಕ್ಷೇತ್ರದ ಗೋಪನಕೊಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ತೆಂಗಿನಕಾಯಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ನಮ್ಮ ಬಿಜೆಪಿ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಹೊಲಸು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟು ಕೆಟ್ಟು ಹೋಗಿದೆ. ಇವರು ಅಲ್ಲಿ ಹೋಗಿ ಹೊಲಸು ತೆಗೆಯುತ್ತೇನೆ ಎಂದರೆ, ಇವರ ಕೈ ಹೊಲಸಾಗುತ್ತದೆ. ಅದು ಶುದ್ಧವಾಗುವುದಿಲ್ಲ. ಅವರು ಕಾಂಗ್ರೆಸ್ ಸೇರಿದ್ದು ದುರ್ದೈವ ಎಂದರು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ್ದು, ಶೆಟ್ಟರ್ ಕಡೆಗೆ ಸಿಎಂ ಬೊಮ್ಮಾಯಿ ಸಾಫ್ಟ್ ಅಸ್ತ್ರ ಬಿಟ್ಟಿರುವುದು. ಇದಕ್ಕೊಂದು ಕಾರಣವೂ ಇದೆ. ಶೆಟ್ಟರ್ ಅಂದರೆ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ತುಂಬಾ ಗೌರವವಿದೆ. ಅವರ ಮೇಲಷ್ಟೇ ಅಲ್ಲ, ಬಿಜೆಪಿಯ ಹಿಂದಿನ ಅವತಾರವಾಗಿದ್ದ ಜನಸಂಘದಲ್ಲಿ ಶೆಟ್ಟರ್ ತಂದೆ ತೊಡಗಿಸಿಕೊಂಡು ನಾಯಕರಾಗಿ ಬೆಳೆದಿದ್ದವರು. ಹಾಗಾಗಿ, ಅವರ ಕುಟುಂಬದ ಮೇಲೆ ಜನರಿಗೆ ಗೌರವವಿದೆ. ಹಾಗಾಗಿಯೇ, ಇಲ್ಲಿ ಪ್ರಚಾರ ಮಾಡುವಾಗ ಸಿಎಂ ಬೊಮ್ಮಾಯಿ ತೀಕ್ಷ್ಣ ನುಡಿಗಳನ್ನು ಬಳಸಿಲ್ಲ.

‘ನಮ್ಮ ಹಿರಿಯರು’ ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಅವರನ್ನು ಸಂಬೋಧಿಸಿರುವ ಸಿಎಂ, ಜಾಗರೂಕ ಹೆಜ್ಜೆಯಿಟ್ಟರು. ಜೊತೆಗೆ, “ಯಾರು ಏನೇ ಮಾಡಲಿ ನಮ್ಮ ಪಕ್ಷ ಕಮಲ. ಕೆಸರಿನಲ್ಲಿ ಅರಳಿ ಅಭಿವೃದ್ಧಿ ಮಾಡುವ ಕಮಲ. ಇದುವರೆಗೂ ಕಮಲಕ್ಕೆ ಬೆಂಬಲ ನೀಡಿದ್ದೀರಿ.‌ ಇದನ್ನು ಮುಂದುವರಿಸಿಕೊಂಡು ಹೋಗಬೇಕು. ತೆಂಗಿನಕಾಯಿ ಅವರ ಜೊತೆಗೆ ನಾನು ಇದ್ದೇನೆ ಎಂದರು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಮಂಜೂರಾತಿ ಕೊಡುತ್ತೇನೆ’’ ಎಂಬ ವಾಗ್ದಾನವನ್ನೂ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!