Mysore
21
overcast clouds
Light
Dark

ಕೋಟಿ ಲೀಟರ್‌ ಹಾಲು ಸಂಗ್ರಹಿಸಿ ಇತಿಹಾಸ ಸೃಷ್ಠಿಸಿದ ಕೆಎಂಎಫ್‌: ಅಭಿನಂದಿಸಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಪ್ರತಿದಿನ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಇಂದು ಒಂದು ಕೋಟಿ ಲೀಟರ್ ಗೆ ತಲುಪಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, ಈ ಶ್ರೇಯ ನಾಡಿನ ಪ್ರತಿಯೊಬ್ಬ ಶ್ರಮಜೀವಿ ಹೈನುಗಾರನಿಗೂ ಸಲ್ಲಬೇಕು ಎಂದು ತಿಳಿಸಿದ್ದಾರೆ.

ನಮ್ಮ‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೈನುಗಾರರಿಂದ ಖರೀದಿಸುವ ಹಾಲಿಗೆ ರೂ.3 ಹೆಚ್ಚಳ ನೀಡುತ್ತಿರುವುದು, ಉತ್ತಮ ಮುಂಗಾರಿನಿಂದಾಗಿ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿರುವುದು ಈ ಎಲ್ಲಾ ಕಾರಣದಿಂದಾಗಿ ಕಳೆದ ವರ್ಷ ನಿತ್ಯ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಇಂದು ಒಂದು ಕೋಟಿ ಲೀಟರ್ ಗೆ ತಲುಪಿದೆ.

Image

ಯಾವ ಕೆಎಂಎಫ್ ಸಂಸ್ಥೆಯನ್ನು ಹಿಂದಿನ ಬಿಜೆಪಿ ಸರ್ಕಾರ ನಷ್ಟದ ಹಾದಿಗೆ ತಳ್ಳಿ ಗುಜರಾತ್‌ನ ಅಮೂಲ್ ಜೊತೆ ವಿನೀಲ ಮಾಡುವ ಕುತಂತ್ರ ನಡೆಸಿತ್ತೋ, ಕನ್ನಡಿಗ ರೈತರು ದಶಕಗಳ ಕಾಲ ಶ್ರಮದಿಂದ ಕಟ್ಟಿದ ಸಂಸ್ಥೆಯನ್ನು ಯಾರದೋ ಮರ್ಜಿಗೆ ಒಳಗಾಗಿ ವಿಲೀನದ ಹೆಸರಲ್ಲಿ ಮುಳುಗಿಸಲು ಹೊರಟಿತ್ತೋ, ಅದೇ ಕೆಎಂಎಫ್ ಇಂದು ಒಂದು ಕೋಟಿ ಲೀಟರ್ ಹಾಲನ್ನು ಸಂಗ್ರಹಿಸಿ, ಇತಿಹಾಸದಲ್ಲೇ ಹೊಸದೊಂದು ದಾಖಲೆ ಬರೆದಿದೆ ಎಂದು ಬಿಜೆಪಿಯನ್ನು ಟೀಕಿಸುವುದರ ಜೊತೆಗೆ ಕೆಎಂಎಫ್‌ನ ಸಾಧನೆಯನ್ನು ಸಿಎಂ ಸಿದ್ದರಾಮಯ್ಯ ಕೊಂಡಾಡಿದ್ದಾರೆ.

https://x.com/siddaramaiah/status/1807011270161465611